ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾ‌ರ್ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ರಘುನಂದನ್ ರಾಮಣ್ಣ ಪದಗ್ರಹಣ

ವಾರ್ತಾಜಾಲ
By -
0

ಗಾಂಧಿನಗರ: ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾ‌ರ್ ಪ್ರದೇಶ ಯೋಜನಾ ಪ್ರಾಧಿಕಾರ ಕಛೇರಿಯಲ್ಲಿ ಅಧ್ಯಕ್ಷರಾಗಿ ರಘುನಂದನ್ ರಾಮಣ್ಣ ಪದಗ್ರಹಣ ಸಮಾರಂಭ.



ಅಧ್ಯಕ್ಷರಾದ ರಘುನಂದನ್ ರಾಮಣ್ಣರವರು ಕುಟುಂಬವರ್ಗದವರು ಪೂಜೆ ಸಲ್ಲಿಸಿ, ಕಡತಕ್ಕೆ ಸಹಿ ಸಲ್ಲಿಸಿ ಅಧಿಕಾರ ಪದಗ್ರಹಣ ಮಾಡಿದರು. ಕಾಂಗ್ರೆಸ್ ಮುಖಂಡರಾದ ಮಹೇಶ್ ಮತ್ತು ಕೆಪಿಸಿಸಿ ಸಂಯೋಜಕರಾದ ಸುದರ್ಶನ್ ರವರು ಉಪಸ್ಥಿತರಿದ್ದರು.

ರಘುನಂದನ್ ರಾಮಣ್ಣರವರು ಮಾತನಾಡಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ನೀಡಿದ್ದಾರೆ.

ಬೆಂಗಳೂರುನಗರ- ಮೈಸೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರ ಇದರಲ್ಲಿ ರಾಮನಗರ, ಚನ್ನಪಟ್ಟಣ, ಮಂಡ್ಯ ಜಿಲ್ಲೆಗಳನ್ನು ಕಾರಿಡಾರ್ ವ್ಯಾಪ್ತಿಗೆ ಬರುತ್ತದೆ.

ಸಾರ್ವಜನಿಕರ ವಾಹನ ಸಂಚಾರ ಸುಗಮ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿ ಎಂದು ಕಾರಿಡಾರ್ ಹೈಟೆಕ್ ಮಾಡುವ ಪ್ರಯುತ್ನ .

ಕಾರಿಡಾರ್ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರದ ಜೊತೆಯಲ್ಲಿ ಕೈಜೋಡಿಸಿ ನಿವಾರಿಸುಲಾಗುವುದು ಎಂದು ಹೇಳಿದರು.

Post a Comment

0Comments

Post a Comment (0)