ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರಾಗಿ ಎಸ್.ಮನೋಹರ್ ಪದಗ್ರಹಣ

ವಾರ್ತಾಜಾಲ
By -
0

ಯಶವಂತಪುರ: ದಿ:ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ನೂತನ ಅಧ್ಯಕ್ಷರಾಗಿ ಎಸ್.ಮನೋಹರ್ ರವರು ಅಧಿಕಾರ ಪದಗ್ರಹಣ ಸಮಾರಂಭ. ಕಂಪನಿಯ ಅಧಿಕಾರಿಗಳು ಮತ್ತು  ಪಕ್ಷದ ನಾಯಕರು, ಕಾರ್ಯಕರ್ತರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳ  ಸಮ್ಮುಖದಲ್ಲಿ ಎಸ್.ಮನೋಹರ್ ರವರು ಪದಗ್ರಹಣ ನೇರವೆರಿತು.

ಅಧ್ಯಕ್ಷರಾಗಿ ಪದಗ್ರಹಣ ಮಾಡಿನ ನಂತರ ಎಸ್.ಮನೋಹರ್ ರವರು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಕಳೆದ 30ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿದ್ದೇನೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ರಾಜ್ಯ ಸಚಿವ ಸಂಪುಟದ ಸಚಿವರು ಸಹಕಾರ, ಬೆಂಬಲದಿಂದ ಇಂದು ದಿ.ಮೈಸೂರು ಎಲೆಕ್ಟ್ರೀಕಲ್ ಇಂಡಸ್ಟ್ರೃೀಸ್ ಲಿಮಿಟೆಡ್ ಅಧ್ಯಕ್ಷನಾಗಿ ಸೇವೆ ಮಾಡುವ ಅವಕಾಶ ಕಾಂಗ್ರೆಸ್ ಪಕ್ಷ ನೀಡಿದೆ.

 ಬಡವರ, ದೀನದಲಿತರ ಪರ ಹೋರಾಟ ಮಾಡುವ, ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ .

ಸರ್ಕಾರದಲ್ಲಿ 5ಗ್ಯಾರಂಟಿ ಯೋಜನೆಗಳು ನಾಡಿನ ಪ್ರತಿ ಕುಟುಂಬಗಳಿಗೆ ತಲುಪಿದೆ. ಅನ್ನಭಾಗ್ಯ,200 ಯೂನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮತ್ತು ಮನೆಯ ಯಾಜಮಾನಿಗೆ 2000ಸಾವಿರ, ಯುವನಿಧಿ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಿ, ಸಮಾಜದ ಮುಖ್ಯವಾಹಿನಿ ತರಲು ಸಾಧ್ಯವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಚಲನಚಿತ್ರ ನಿರ್ಮಾಪಕ ಸಾ.ರಾಗೋವಿಂದ್, ನಿಕಟಪೂರ್ವ ಬಿಬಿಎಂಪಿ ಸದಸ್ಯ ಎಸ್.ಕೇಶವಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ಶುಭಾ, ಶಾಂಭವಿ, ಇಂದಿರಾ, ಪರಿಸರ ರಾಾಮಕೃಷ್ಣ, ಜನಾರ್ಧನ್, ಆನಂದ್, ಸುಧಾಕರ್ ರವರು ಭಾಗವಹಿಸಿದ್ದರು.

Post a Comment

0Comments

Post a Comment (0)