ನ. ಶ್ರೀ. ಸುಧೀಂದ್ರ ರಾವ್ ಗೆ ದತ್ತ ಸಾಮ್ರಾಟ್ ಪ್ರಶಸ್ತಿ

ವಾರ್ತಾಜಾಲ
By -
0

ಬೆಂಗಳೂರು :- ಹಿರಿಯ ಪತ್ರಕರ್ತ ನ. ಶ್ರೀ. ಸುಧೀಂದ್ರ ರಾವ್ ಗೆ ದತ್ತ ಸಾಮ್ರಾಟ್ ಪ್ರಶಸ್ತಿ ಯನ್ನು ಹಿರಿಯ ಜನಪದ ಅಂತಾರಾಷ್ಟ್ರೀಯ ಕಲಾವಿದ ಅಪ್ಪಗೆರೆ ತಿಮ್ಮರಾಜು ಪ್ರದಾನ ಮಾಡಿದರು,

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ದತ್ತಶ್ರೀ ಸಾಂಸ್ಕೃತಿಕ ವೇದಿಕೆಯು (ರಿ ) ಯಲಹಂಕ ನ್ಯೂ ಟೌನ್ ಬೆಂಗಳೂರು  ಆಯೋಜಿಸಿದ್ದ  ಮಾಘ ಮಾಸ ಸಂಗೀತೋತ್ಸವ ಹಾಗೂ ದತ್ತ ಸಾಮ್ರಾಟ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಧಾನ ಮಾಡಿದರು, 

ನಂತರ ಮಾತನಾಡಿದ ಅವರು ಯುವ ಪೀಳಿಗೆ ಸಾಂಸ್ಕೃತಿಕ ಕಲೆಗಳನ್ನು ಕಲಿತು ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ಕೊಟ್ಟರು.

ಇದೇ ಸಂದರ್ಭದಲ್ಲಿ ದತ್ತ ಸಾಮ್ರಾಟ್ ಪ್ರಶಸ್ತಿಗೆ ಭಾಜನಾರಾದ  ಎಸ್. ಮೂರ್ತಿ-ಸಹಕಾರನಗರ ಹಿರಿಯ ನಾಗರಿಕ ವೇದಿಕೆ ಸಂಘ,

 ವಿ. ಪುಣ್ಯೇಶ್  ಕುಮಾರ್- ಖ್ಯಾತ ಸಂಗೀತ ನಿರ್ದೇಶಕರು  ಇವರುಗಳ ಜೀವಮಾನ ಸಾಧನೆ ಗುರುತಿಸಿ ಪ್ರಶಸ್ತಿ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಮುಖ್ಯಅತಿಥಿಗಳಾಗಿ  ಡಾ.ಹನಿಯೂರು ಚಂದ್ರೆಗೌಡ, ಧನಪಾಲ್ ಜೈನ್- ಸಾಯಿಸಿದ್ದಿ ಇವೆಂಟ್ಸ, ಶ್ರೀ ಮತಿ ಶಶಿಕಲಾ-ಯೋಗ ಶಿಕ್ಷಕಿ ಮುಂತಾದವರು ಭಾಗವಹಿಸಿದ್ದರು. ಸಂತವಾಣಿ ಸುಧಾಕರ್ ಮತ್ತು ತಂಡದವರಿಂದ ಸುಗಮ ಸಂಗೀತ, ಭರತನಾಟ್ಯ, ಶೋಭಾನೆ ಪದ, ರಂಗ ಗೀತೆ -ಜಾನಪದ-ಭಜನೆ ಗಾಯನ, ಹಲವು ಜಾನಪದ ಕಲಾವಿದರು ಕಲಾಮೇಳವನ್ನು ನಡೆಸಿಕೊಟ್ಟರು.

ಕಾರ್ಯಕ್ರಮ ಆಯೋಜಿಸಿದ್ದ ದತ್ತಶ್ರೀ ಸಂಸ್ಥೆಯ ಅಧ್ಯಕ್ಷರಾದ ಭಾಸ್ಕರ್ ಮೂರ್ತಿ ಹಾಗೂ ಆಯೋಜಕರಾದ ಶೀ ಸಾಮಾನ್ಯ ಸುಹಾಸ್ ರವರನ್ನು ಕೂಡ ಅಭಿನಂದಿಸಲಾಯಿತು.

Post a Comment

0Comments

Post a Comment (0)