ದೇಶದ್ರೋಹಿ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ: ಎನ್.ರವಿಕುಮಾರ್

ವಾರ್ತಾಜಾಲ
By -
0

ದೇಶವನ್ನು ರಾಜ್ಯವನ್ನು ರಕ್ಷಿಸಬೇಕಾದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲು ಅವಕಾಶ ಕೊಡುತ್ತದೆ. ಕೂಗಿದವರನ್ನು ಕೂಡಲೇ ಬಂದಿಸುವ ಬದಲು ಕೂಡಲೇ ಸುರಕ್ಷಿತವಾಗಿ ಹೊರಹೋಗಲು ಅವಕಾಶಕೊಡುತ್ತದೆ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಪ್ರಶ್ನೆ ಮಾಡಿದ ಪತ್ರಕರ್ತರ ಮೇಲೆ ಏಕವಚನದಿಂದ ದರ್ಪ ತೋರಿಸಿ ಗೂಂಡಾ ರೀತಿ ವರ್ತಿಸುತ್ತಾರೆ. ಪ್ರತಿಪಕ್ಷಗಳು ವಿರೋಧಿಸಿದರೆ ಸರ್ಕಾರದ ಸಚಿವರಾದ ಪ್ರಿಯಾಂಕ ಖರ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರನ್ನು ರಕ್ಷಿಸುತ್ತಾರೆ ಬೆಂಬಲಿಸುತ್ತಾರೆ ಕೂಗೇ ಇಲ್ಲ ಎಂದು ವಾದಿಸುತ್ತಾರೆ ಇದೂ ಕೂಡಾ ದೇಶದ್ರೋಹವೇ ಆಗಿದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದ್ದಾರೆ. ದೇಶದ್ರೋಹಿಗಳನ್ನು ಸಮರ್ಥಿವುದೂ ದೇಶದ್ರೋಹವೇ ಆದ ಕಾರಣ ಕೂಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಅವರನ್ನು ಬೆಂಬಲಿಸಿ ಸಮರ್ಥಿಸಿ ಸಂಚಿನ ಭಾಗವೇ ಆಗಿರುವ ಸಚಿವರುಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು.ಆ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.

ಬಿ.ಜೆ.ಪಿಯು "ನೇಷನ್ ಫಸ್ಟ್ ಪಾರ್ಟಿ  ನೆಸ್ಟ್ಎನ್ನುತ್ತಿದ್ದರೆ ಕಾಂಗ್ರೆಸ್ "ಪಾಕಿಸ್ತಾನ ಫಸ್ಟ್ ಇಂಡಿಯಾ   ನೆಸ್ಟ್ " ಎಂಬ ದುಸ್ಥಿತಿ ತಲುಪಿದೆ. ಆ ಮೂಲಕ ಭಾರತವನ್ನು ಕಡೆಗಣಿಸಿ ಪಾಕಿಸ್ತಾನವನ್ನು ಬೆಂಬಲಿಸುವ ಮುಸಲ್ಮಾನರನ್ನು ಬೆಂಬಲಿಸಿ ಭಾರತೀಯ ಮುಸ್ಲಿಮರನ್ನು ಅವಮಾನಿಸಿ ಮತ್ತೊಮ್ಮೆ ದೇಶ ವಿಭಜನೆಯ ದುರಂತಕ್ಕೆ ಮುಂದಾಗುತ್ತಿರುವ ಅನುಮಾನ ದೇಶದ ಜನರಲ್ಲಿ ಮೂಡುತ್ತಿದೆ.ಇವರ ನಡವಳಿಕೆ ದೇಶಕ್ಕೆ, ದೇಶದ ಜನತೆಗೆ ಮಾಡುತ್ತಿರುವ ವಂಚನೆಯಾಗಿದೆ.ರಾಜ್ಯಪಾಲರು ಕೂಡಲೇ ಮಧ್ಯೆ ಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಆ ಮೂಲಕ ದೇಶದ ಏಕತೆ ಅಖಂಡತೆ ಸಾರ್ವಭೌಮತೆಯನ್ನು ರಕ್ಷಿಸಬೇಕು.

ಅಧಿಕಾರಕ್ಕಾಗಿ ಅಂದು ದೇಶವನ್ನು ತುಂಡು ಮಾಡಿದವರು ಇಂದು ಮತ್ತೆ ಅದೇ ಅಧಿಕಾರಕ್ಕಾಗಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರ ಬೆನ್ನಿಗೆ ನಿಂತಿದ್ದಾರೆ ಕನ್ನಡಿಗರ ಕನ್ನಡ ನಾಡಿನ ದೇಶಭಕ್ತರ ಪರಂಪರೆಯನ್ನು ಧ್ವಂಸ ಮಾಡುತ್ತಿದ್ದಾರೆ.ನಾನು ಮೊದಲು ಭಾರತೀಯ ಅನಂತರವೂ ಭಾರತೀಯ ಎಂದ ಅಂಬೇಡ್ಕರ್ರವರ ಕನಸಿನ ಭಾರತವನ್ನು ನಾಶ ಮಾಡಲು ಹೊರಟಿದ್ದಾರೆ.

ಆದ್ದರಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೆಹಲಿ ಬೆಂಗಳೂರು ಹಾವೇರಿ ಮೂಲದ ಮೂವರನ್ನು ಬಂದಿಸುವುದರ ಜೊತೆಗೆ ಬೆಂಬಲಿಸಿದ ಕಾಂಗ್ರೆಸ್ ಸರ್ಕಾರದ ಸಚಿವರೂ ಈ ಸಂಚಿನ ಭಾಗವಾಗಿದ್ದಾರೆ.ಅವರ ರಾಜೀನಾಮೆ ಪಡೆಯಬೇಕು ಮತ್ತು ಅವರ ವಿರುದ್ಧ ದೇಶದ್ರೋಹದ ಕೇಸನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸತ್ಯವನ್ನು ಹೇಳಿದ ಪತ್ರಕರ್ತರ ವಿರುದ್ಧ ಏಕವಚನ ಪ್ರಯೋಗಿಸಿ ಗೂಂಡಾ ರೀತಿ ಮಾತಾಡಿದ ನಾಸೀರ್ ಹುಸೇನ್ ಅವರು ರಾಜೀನಾಮೆ ನೀಡಬೇಕು.

ಕಾಂಗ್ರೇಸ್  ಕುಮ್ಮಕ್ಕು ಇಲ್ಲದಿದ್ದರೆ ಕರ್ನಾಟಕದ ಶಕ್ತಿಕೇಂದ್ರ ವಿಧಾನ ಸೌಧದಲ್ಲಿ ದೇಶವಿರೋಧಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ಧೈರ್ಯ ಮಾಡುತ್ತಿರಲಿಲ್ಲ. ದೇಶದ್ರೋಹಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಸರ್ಕಾರವೂ ದೇಶದ್ರೋಹಿ ಸರ್ಕಾರ. ರಾಜ್ಯಪಾಲರು ರಾಷ್ಟ್ರಪತಿಗಳು ಇಂಥ ದೇಶವಿರೋದಿ, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕೆಂದು ಒತ್ತಾಯಿಸುತ್ತೇನೆ


Post a Comment

0Comments

Post a Comment (0)