ತಾಂತ್ರಿಕ ಸಹಾಯಕ ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ

ವಾರ್ತಾಜಾಲ
By -
0
ಬೆಂಗಳೂರು, ಮಾರ್ಚ್ 16 (ಕರ್ನಾಟಕ ವಾರ್ತೆ):
ಬೆಂಗಳೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಚೇರಿಯಲ್ಲಿ ತಾಂತ್ರಿಕ ಸಹಾಯಕ ಹುದ್ದೆಯ ಅಂತಿಮ ಆಯ್ಕೆಪಟ್ಟಿಯನ್ನು ನಿಗಮದ ಅಧಿಕೃತ ವೆಬ್-ಸೈಟ್ ಞsಡಿಣಛಿರಿobs.ಛಿom ನಲ್ಲಿ ಪ್ರಕಟಿಸಲಾಗಿತ್ತು. ಪ್ರಸ್ತುತ ತಾಂತ್ರಿಕ ಸಹಾಯಕ ಹುದ್ದೆಗೆ ಆಯ್ಕೆಗೊಂಡು ವರದಿ ಮಾಡಿಕೊಳ್ಳದ ಅಭ್ಯರ್ಥಿಗಳ ಸ್ಥಾನದಲ್ಲಿ ಹೆಚ್ಚುವರಿ ಆಯ್ಕೆಪಟ್ಟಿಯನ್ನು ತಯಾರಿಸಿ, 2024ನೇ ಮಾರ್ಚ್ 15 ರಂದು ನಿಗಮದ ಕೇಂದ್ರ ಕಛೇರಿಯ ಸೂಚನಾ ಫಲಕ ಮತ್ತು ನಿಗಮದ ಅಧಿಕೃತ ವೆಬ್‍ಸೈಟ್ ksrtcjobs.com ನಲ್ಲಿ ಪ್ರಕಟಿಸಲಾಗಿದೆ. ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದ 11 ಅಭ್ಯರ್ಥಿಗಳಿಗೆ ಸಂಬಂಧಿಸಿದ ವಿಭಾಗಗಳಿಂದ ನೇಮಕಾತಿ ಪ್ರಸ್ತಾವನೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರು (ಸಿ&ಜಾ) ಹಾಗೂ ಆಯ್ಕೆ ಸಂಸ್ಥೆಯ ಅಧ್ಯಕ್ಷರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾರಸಾಸಂ ಸಿಬ್ಬಂದಿಗಳ ಬಾಕಿ ಮೊತ್ತ ಪಾವತಿಸಲು ರೂ. 84 ಕೋಟಿ ಮಂಜೂರು


ಬೆಂಗಳೂರು, ಮಾರ್ಚ್ 16 (ಕರ್ನಾಟಕ ವಾರ್ತೆ):

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಪಾವತಿಸಲು ಒಟ್ಟು ರೂ. 84 ಕೋಟಿಗಳನ್ನು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಂಜೂರು ಮಾಡಿದ್ದಾರೆ.

ಸಂಸ್ಥೆಯ ಸಿಬ್ಬಂದಿಗಳಿಗೆ (ಸದರಿ ಅವಧಿಯಲ್ಲಿನ ನಿವೃತ್ತ ಸಿಬ್ಬಂದಿಗಳನ್ನು ಸೇರಿ) 2022-23 ಮೇ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತ ರೂ.24 ಕೋಟಿಯನ್ನು ಹಾಗೂ ಜುಲೈ-2022 ರಿಂದ ನವೆಂಬರ್-2022 ರ ಮಾಹೆಯ 5 ತಿಂಗಳು, ಜನವರಿ-2023 ರಿಂದ ಜುಲೈ-2023 ರವರೆಗಿನ 7 ತಿಂಗಳು ಮತ್ತು ಜುಲೈ-2023 ರಿಂದ ಅಕ್ಟೋಬರ್-2023 ರವರೆಗಿನ 4 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ ಮೊತ್ತ ರೂ. 54 ಕೋಟಿಯನ್ನು ಪಾವತಿಸಲು ಆದೇಶಿಸಲಾಗಿದೆ.

ಜನವರಿ-2024 ರಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಸಿಬ್ಬಂದಿಗಳ ಉಪಧನ ರೂ.6 ಕೋಟಿ ಮೊತ್ತವನ್ನು ಮಾರ್ಚ್ 15 2024 ರಂದು ಮಂಜೂರು ಮಾಡಲಾಗಿದೆ ಎಂದು ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ಮತ್ತು ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ನಡುವೆ ಒಪ್ಪಂದ


ಬೆಂಗಳೂರು, ಮಾರ್ಚ್ 16 (ಕರ್ನಾಟಕ ವಾರ್ತೆ):

ಇಡಿಸಿಎಸ್ ನಿರ್ದೇಶನಾಲಯದಡಿಯಲ್ಲಿರುವ ಗ್ರಾಮ ಒನ್ ಯೋಜನೆಯ ಗ್ರಾಮ ಒನ್ ಫ್ರಾಂಚೈಸಿಗಳು ಹಣಕಾಸು/ಬ್ಯಾಂಕಿಂಗ್ ಸೇವೆಗಳನ್ನು ಗ್ರಾಮೀಣ ಭಾಗದ ನಾಗರಿಕರಿಗೆ ಒದಗಿಸುವ ಸಲುವಾಗಿ ಇಡಿಸಿಎಸ್ ನಿರ್ದೇಶನಾಲಯವು ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ನೊಂದಿಗೆ ಕರಾರು ಒಪ್ಪಂದ (MoU) ಮಾಡಿಕೊಳ್ಳಲಾಗಿದೆ.

ಐಪಿಪಿಬಿ ಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ರಾಷ್ಟ್ರದ ಪ್ರಗತಿಗೆ ಉತ್ತಮ ಕೊಡುಗೆ ನೀಡಲಿದೆ. ಗ್ರಾಮೀಣ ಭಾಗದ ನಾಗರೀಕರು ತಾಲ್ಲೂಕು ಮಟ್ಟದ ಕಛೇರಿಗಳಿಗೆ ಭೇಟಿ ನೀಡದೆ ತಮ್ಮ ಗ್ರಾಮದಲ್ಲಿಯೇ ಎಲ್ಲಾ ಇಲಾಖೆಗಳ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಸರ್ಕಾರವು ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ. ಗ್ರಾಮ ಒನ್ ಫ್ರಾಂಚೈಸಿಯು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ನಾಗರಿಕರು ಐಪಿಪಿಬಿ ಯ ತಂತ್ರಜ್ಞಾನ-ನೇತೃತ್ವದಲ್ಲಿ ಪರಿಹರಿಸಿಕೊಳ್ಳಲು ಹಾಗೂ ಸದರಿ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಪ್ರದೇಶಗಳಲ್ಲಿ ವಿಸ್ತರಿಸಲು ಸಾಧ್ಯವಾಗುತ್ತದೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಐಪಿಪಿಬಿಯ ನವೀನ ತಂತ್ರಜ್ಞಾನದ ಮೂಲಕ ಐಪಿಪಿಬಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ನಿರ್ವಹಣೆ, ಆಧಾರ್-ಸೀಡಿಂಗ್, ಇ-ಕೆವೈಸಿ ಸ್ಥಿತಿ ಪರಿಶೀಲನೆಗಳು ಮತ್ತು ನವೀಕರಣಗಳು, ನಿಷ್ಕ್ರಿಯ ಖಾತೆಗಳ ಪರಿಶೀಲನೆ, ವಿಮೆ ಮತ್ತು ಸಾಲದ ಉಲ್ಲೇಖಿತ ಸೇವೆಗಳು, ಐಪಿಪಿಬಿ ನಗದು ಠೇವಣಿ ಮತ್ತು ಠೇವಣೆಯನ್ನು ಹಿಂಪಡೆಯುವುದು. ಖಾತೆಗಳ ನಡುವೆ ತ್ವರಿತ ನಿಧಿ ವರ್ಗಾವಣೆ, ಸ್ವಯಂ ಮತ್ತು ಇತರ ಐಪಿಪಿಬಿ ಖಾತೆಗಳಿಗೆ ಸುಲಭ ಹಣ ವರ್ಗಾವಣೆ, ಬಿಲ್ ಪಾವತಿಗಳು ಮತ್ತು ಖಾತೆ ವಿವರಗಳ ಪರಿಷ್ಕರಣೆ, ಐಪಿಪಿಬಿ ಮತ್ತು ಐಪಿಪಿಬಿ ಅಲ್ಲದ ಗ್ರಾಹಕರಿಗೆ ಹಣ ವರ್ಗಾವಣೆ ಮುಂತಾದ ಸೇವೆಗಳನ್ನು ಒದಗಿಸುತ್ತದೆ.

"ಪ್ರತಿಯೊಬ್ಬ ಗ್ರಾಹಕರು ಮುಖ್ಯರಾಗಿದ್ದು, ಪ್ರತಿ ವಹಿವಾಟು ಮಹತ್ವದ್ದಾಗಿದೆ ಮತ್ತು ಪ್ರತಿ ಠೇವಣಿ ಮೌಲ್ಯಯುತವಾಗಿರುತ್ತದೆ" ಇದು ಐಪಿಪಿಬಿ ಧೈಯವಾಕ್ಯವಾಗಿದೆ. ಐಪಿಪಿಬಿ ಕಡಿಮೆ ನಗದು ಆರ್ಥಿಕತೆಗೆ ಪೂರಕತೆಯನ್ನು ಒದಗಿಸಲು ಮತ್ತು ಡಿಜಿಟಲ್ ಇಂಡಿಯಾದ ದೃಷ್ಟಿಗೆ ಕೊಡುಗೆ ನೀಡಲು ಬದ್ಧವಾಗಿದೆ. ಪುತಿಯೊಬ್ಬ ಪ್ರಜೆಯೂ ಆರ್ಥಿಕವಾಗಿ ಸುರಕ್ಷಿತ ಮತ್ತು ಸಬಲರಾಗಲು ಸಮಾನ ಅವಕಾಶವನ್ನು ಪಡೆದಾಗ ಭಾರತವು ಅಭಿವೃದ್ಧಿ ಹೊಂದುತ್ತದೆ ಎಂದು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್)ನ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Post a Comment

0Comments

Post a Comment (0)