BWSSB ಅಧಿಕಾರಿಗಳ ಜತೆ ಶಾಸಕ ಅಶ್ವತ್ಥನಾರಾಯಣ್ ಸಭೆ

ವಾರ್ತಾಜಾಲ
By -
0

ಬೆಂಗಳೂರು : ಮಲ್ಲೇಶ್ವರದಲ್ಲಿಂದು BWSSB ಅಧಿಕಾರಿಗಳು ಶಾಸಕ ಅಶ್ವತ್ಥನಾರಾಯಣ್ ಅವರೊಂದಿಗೆ ಸಭೆ ನಡೆಸಲಾಯಿತು. ಈಗಾಗಲೇ ನೀರಿಗಾಗಿ ಹಾಹಾಕಾರ ನಿರ್ಮಾಣಗೊಂಡಿದೆ. ಈ ಕುರಿತಂತೆ ಮಲ್ಲೇಶ್ವರದ ಜನತೆ ನೀರಿಗಾಗಿ ಚಿಂತಿಸುವ ಅಗತ್ಯ ವಿಲ್ಲ. ಕ್ಷೇತ್ರದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗದು ಎಂಬ ವಿಶ್ವಾಸ ನೀಡಿದ್ದಾರೆ. 


ಅಂತೆಯೇ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಜನವಸತಿ ಪ್ರದೇಶಗಳಿಗೆ ನೀರು ಸರಬರಾಜಿಗೆ ಸಂಬAಧಪಟ್ಟAತೆ ಯಾವುದೇ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಮಲ್ಲೇಶ್ವರದ ಜನತೆ ಈ ಬಗ್ಗೆ ಆತಂಕಪಡಬೇಕಾಗಿಲ್ಲ ಎಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.

Post a Comment

0Comments

Post a Comment (0)