ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 402ನೇ ಪಟ್ಟಾಭಿಷೇಕ ಮತ್ತು 428ನೇ ವರ್ಧಂತ್ಯೋತ್ಸವದ ಪ್ರಯುಕ್ತ ಮಾರ್ಚ್ 11 ರಿಂದ 17ರ ವರೆಗೆ ಒಟ್ಟು ಏಳು ದಿನಗಳ ಕಾಲ ಪ್ರತಿ ದಿನ ಒಬ್ಬೊಬ್ಬ ಸ್ವಾಮೀಜಿಗಳಿಂದ ಪ್ರವಚನ ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಮಾರ್ಚ್ 11 : ಬೆಳಗ್ಗೆ ಸೋಂದಾ ಶ್ರೀ ವಾದಿರಾಜ ಮಠದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ, ಭೂತರಾಜರ ಪೂಜೆ, ಸಂಜೆ ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶೀರ್ವಚನ.
ಮಾರ್ಚ್ 12 ರಿಂದ 17ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಪ್ರವಚನ ಕಾರ್ಯಕ್ರಮ, ಕ್ರಮವಾಗಿ : ತಂಬಿಹಳ್ಳಿ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ಮಾಧವತೀರ್ಥರು, ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿದ್ಯಾಶ್ರೀಶತೀರ್ಥರು, ಶ್ರೀ ಕಾಣಿಯೂರು ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿದ್ಯಾವಲ್ಲಭತೀರ್ಥರು,ಶ್ರೀ ಕುಕ್ಕೆಸುಬ್ರಹ್ಮಣ್ಯಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿದ್ಯಾಪ್ರಸನ್ನತೀರ್ಥರು, ಪರಮಪೂಜ್ಯ ಶ್ರೀ 1008 ಶ್ರೀ ಸುವಿದ್ಯೇಂದ್ರತೀರ್ಥರು ಹಾಗೂ ಶ್ರೀ ಭೀಮನಕಟ್ಟೆಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ರಘುವರೇಂದ್ರತೀರ್ಥರು ಇವರುಗಳಿಂದ ಧಾರ್ಮಿಕ ಪ್ರವಚನ ಮಾಲಿಕೆಯನ್ನು ಏರ್ಪಡಿಸಿದೆ ಎಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ಎಚ್. ನರಹರಿ ರಾವ್ ಅವರು ತಿಳಿಸಿದ್ದಾರೆ.