ಮಾ. 7ರಂದು ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ನಟ ರವಿಚಂದ್ರನ್, ನಟಿ ಮಾಲಾಶ್ರೀರವರಿಂದ ಉದ್ಘಾಟನೆ

ವಾರ್ತಾಜಾಲ
By -
0

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ದಿನಾಂಕ 7-3-2024ರ ಬೆಳಗ್ಗೆ 10ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿ ಡಾ||ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧಕಿಯರಿಗೆ *ದಿಟ್ಟ ಮಹಿಳಾ ಪ್ರಶಸ್ತಿ* ಪ್ರದಾನ ಸಮಾರಂಭ ಈ ಕುರಿತು ಮಾಧ್ಯಮಗಳಿಗೆ ಅಧ್ಯಕ್ಷರಾದ ಎ.ಅಮೃತ್ ರಾಜ್  ಮಾಹಿತಿ ನೀಡಿದರು.



ವಿಶ್ವ ಮಹಿಳಾ ದಿನಾಚರಣೆಯನ್ನು ಬಿಬಿಎಂಪಿ ಆಡಳಿತಗಾರರಾದ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸುತ್ತಿದ್ದು, ಮುಖ್ಯ ಅತಿಥಿಗಳಾಗಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಹಿರಿಯ ಚಲನಚಿತ್ರ ನಟ ವಿ.ರವಿಚಂದ್ರನ್, ನಟಿ ಮಾಲಾಶ್ರೀ,  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮತ್ತು ಐ.ಎ.ಎಸ್.ಅಧಿಕಾರಿಗಳಾದ ಮೌನೀಶ್ ಮೌದ್ದೀಲ್, ಶ್ರೀಮತಿ ಸ್ನೇಹಾಲ್, ಸೂರಳ್ಕರ್ ವಿಕಾಸ್ ಕಿಶೋರ್, ಡಾ||ಹರೀಶ್ ಕೆ.ಮತ್ತು ಕೆ.ಎ.ಎಸ್ ಅಧಿಕಾರಿ ಡಾ||ಮಂಜುನಾಥಸ್ವಾಮಿರವರು ಉದ್ಘಾಟನೆ ನೇರವೇರಿಸುವರು.

ಸಾಧಕಿಯರಾದ ಚಲನಚಿತ್ರ ನಟಿ ಶ್ರೀಮತಿ ವಿನಯಪ್ರಸಾದ್, ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಎಂ.ಡಿ.ಪಲ್ಲವಿ, ಯುನೈಟೆಡ್ ಆಸ್ಪತ್ರೆಯ ನಿರ್ದೇಶಕಿ ಡಾ||ವೀಣಾ ಸಿದ್ದಾರೆಡ್ಡಿ, ಸಹಾಯಕ ಪೊಲೀಸ್ ಆಯುಕ್ತರಾದ ಎಂ.ಸಿ.ಕವಿತಾ, ಚಲನಚಿತ್ರ ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ, ಹಿರಿಯ ವಕೀಲೆ ಶ್ರೀಮತಿ ಶೀದೇವಿ ಪಾಟೀಲ್, ಟಿ.ವಿ.9 ನಿರೂಪಕಿ ಶುಭಶ್ರೀ ಜೈನ್,  ಹಿರಿಯ ಪತ್ರಕರ್ತೆ ಶ್ರೀಮತಿ ಪ್ರತಿಮಾ ಭಟ್,  ವಿಸ್ತಾರ್ ನ್ಯೂಸ್ ಹಿರಿಯ ನಿರೂಪಕಿ ಶ್ರೀಮತಿ ಪ್ರತಿಭಾ ಪ್ರಕಾಶ್, ಸಿಂಧಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಸುಚಿತ್ರಾ ಮತ್ತು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 14ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ದಿಟ್ಟ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

 ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .

ಯುನೈಟೆಡ್ ಆಸ್ಪತ್ರೆ ಆರೋಗ್ಯ ತಪಾಸಣೆ , ಹೃದಯ ಸಂಬಂಧಪಟ್ಟ ತಪಾಸಣೆ ಮತ್ತು ಶೇಖರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ  ಉಚಿತ ಆರೋಗ್ಯ ತಪಾಸಣೆ .

 ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘವು ಅಧಿಕಾರಿ ಮತ್ತು ನೌಕರರ ಹಿತರಕ್ಷಣೆ ಜೊತೆಯಲ್ಲಿ ನಗರದ ನಾಗರಿಕರ ಹಿತ ರಕ್ಷಣೆಗಾಗಿ ದುಡಿಯುವ ಸಂಘವಾಗಿದೆ.

ನಮ್ಮ ಸಂಘವು ಸಾರ್ವಜನಿಕರ ನೋವು ಸ್ಪಂದಿಸುವ ಮೂಲಕ ಜನಪರ ಕಾರ್ಯ ಮಾಡುತ್ತಿದೆ.

ಕೊರೋನ - ಲಾಕ್ ಡೌನ್ ಸಮಯದಲ್ಲಿ ದಿನಸಿ ಕಿಟ್ ಮತ್ತು ಔಷಧಿಗಳನ್ನು ಉಚಿತ ವಿತರಣೆ, ಧರ್ಮಸ್ಥಳ ನೀರಿನ ಅಭಾವವಿದ್ದಾಗ 1ಲಕ್ಷ ಲೀಟರ್ ಕುಡಿಯುವ ನೀರು ನೀಡಲಾಯಿತು.

ಮರದ ಗೊಂಬೆ ಮೃತಪಟ್ಟ ಕುಟುಂಬಕ್ಕೆ ಮತ್ತು ಆಸಿಡ್ ದಾಳಿಗೊಳಗಾದ ಯುವತಿ ಆರ್ಥಿಕವಾಗಿ ಸಹಾಯಹಸ್ತ ನೀಡಲಾಯಿತು.

ಪರಿಸರ ಜಾಗೃತಿ ಅಭಿಯಾನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.

ಕನ್ನಕ ಭಾಷೆ ಕಂಪನ್ನು ಹೊರ ರಾಷ್ಟ್ರವಾದ ನೇಪಾಳ ಮತ್ತು ಹೊರರಾಜ್ಯವಾದ ಕಾಶಿಯಲ್ಲಿ ಅದ್ದೂರಿ ಅಚರಿಸಲಾಯಿತು.

ನಮ್ಮ ನಾಡಿನ ಸಾಧಕ/ಸಾಧಕಿಯರನ್ನ ಗುರುತಿಸಿ ಸನ್ಮಾನಿಸಿ ಗೌರವಿಸುವುದು ನಮ್ಮ ಕರ್ತವ್ಯ .

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕಿಯರಿಗೆ  ಸನ್ಮಾನಿಸಲಾಗುತ್ತದೆ ಎಂದು ಅಧ್ಯಕ್ಷ  ಎ.ಅಮೃತ್ ರಾಜ್ ಹೇಳಿದರು.

Post a Comment

0Comments

Post a Comment (0)