ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಮ್ಮ ಸರಸ್ ಮೇಳ-2024'

ವಾರ್ತಾಜಾಲ
By -
0

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಮಹಿಳೆಯರ ಸಬಲೀಕರಣ, ಸ್ವಾವಲಂಬನೆ ದೃಷ್ಟಿಯಿಂದ ರಾಜ್ಯ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಬೆಂಗಳೂರು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 'ನಮ್ಮ ಸರಸ್ ಮೇಳ-2024' ಹಮ್ಮಿಕೊಳ್ಳಲಾಗಿದೆ.

ಬೃಹತ್ ವಸ್ತುಪ್ರದರ್ಶನ ಮತ್ತು ಮಾರಾಟಕ್ಕಾಗಿ 'ನಮ್ಮ ಸರಸ್ ಮೇಳ'ವು ಫೆಬ್ರವರಿ 29ರಿಂದ ಆರಂಭವಾಗಿದ್ದು ಮಾರ್ಚ್ 09ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ. ಈ ಮೇಳವನ್ನು ಮೂರನೇ ಬಾರಿಗೆ ಹಮ್ಮಿಕೊಳ್ಳಲಾಗುತ್ತಿದೆ. ಈ ಮೇಳದಲ್ಲಿ ದೇಶದ 250 ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.


ಬೆಂಗಳೂರಿನಲ್ಲಿ ಆಯೋಜಿಸಿರುವ ನಮ್ಮ ಸರಸ್ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಸ್ವ-ಸಹಾಯ ಮಹಿಳೆಯರು ತಯಾರು ಮಾಡಿರುವ ಉತ್ಪನ್ನಗಳನ್ನು ವೀಕ್ಷಿಸಬಹುದು ಮತ್ತು ಖರೀದಿಸಬಹುದಾಗಿದೆ.

ದೇಶದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ತನ್ನದೇ ಕಲೆ, ಕೌಶಲ್ಯಗಳ ಮೂಲಕ ತಯಾರಾಗುವ ಆಟದ ಸಾಮಾನುಗಳು, ಮರದ ಗೊಂಬೆಗಳು, ಸೀರೆಗಳು, ಆಕರ್ಷಣೆಯ ಬಟ್ಟೆಗಳು, ಕಸೂತಿಗಳು, ನಾರಿನ ಉತ್ಪನ್ನದ ವಸ್ತುಗಳು, ಮಸಾಲ ಪದಾರ್ಥಗಳು, ಸಿರಿಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು ಸೇರಿದಂತೆ ವಿವಿಧ ಬಗೆಯ ತಿಂಡಿ-ತಿನಿಸುಗಳು, ಈ ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕರಕುಶಲ ಉದ್ಯಮದ ವಸ್ತುಗಳು, ವಿವಿಧ ಖಾದ್ಯಗಳು, ಆಹಾರ ಮೌಲ್ಯವರ್ಧಕ ವಸ್ತುಗಳ ಮಳಿಗೆಗಳು ಇದ್ದು, ಸಾಂಪ್ರದಾಯಕ ಕಲೆಗಳಾದ ಕಸೂತಿ, ಮೇಕೆ ಚರ್ಮದ ಮೇಲಿನ ಆಕರ್ಷಕ ಬಣ್ಣದ ಚಿತ್ತಾರಗಳು, ಬಿದಿರಿನಿಂದ ಮೂಡಿಬಂದ ಕಲಾಕೃತಿಗಳು ಇಳಕಲ್ ಸೀರೆ, ರೇμÉ್ಮ ಸೀರೆ, ಉತ್ತರ ಕರ್ನಾಟಕದ ಕುರಿ ಉಣ್ಣೆಯ ಉತ್ಪನ್ನಗಳಾದ ಶಾಲು, ಟೋಪಿ ಮತ್ತು ಇತರೆ ಪದಾರ್ಥಗಳು ಮನಸೆಳೆಯುತ್ತಿದೆ.

ಮೇಳದಲ್ಲಿ ವಿವಿಧ ರಾಜ್ಯಗಳು ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರಸಿದ್ದಿ ಹೊಂದಿರುವ ಖಾದ್ಯಗಳ ಪ್ರದರ್ಶನ ಮಾಡಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಜನತೆಗೆ ವೈವಿಧ್ಯಮಯ ತಿಂಡಿ ತಿನಿಸುಗಳ ರುಚಿ ಸವಿಯುವಂತೆ ಮಾಡಲಾಗಿದೆ.

ಮಾರ್ಚ್ 04ರಂದು ಎನ್‍ಆರ್‍ಎಲ್‍ಎಂ  ವತಿಯಿಂದ ಉತ್ಪನ್ನಗಳ ಮೌಲ್ಯ ಮತ್ತು ಸರಪಳಿ ವಿಧಾನಗಳ ಬಗ್ಗೆ ಶಿಬಿರ ಏರ್ಪಡಿಸಲಾಗಿದೆ. ಇದರೊಂದಿಗೆ, ಪೂರ್ವ ವಲಯ ಸ್ವ-ಸಹಾಯ ಗುಂಪುಗಳ ಸದಸ್ಯರು ಹಾಗೂ ಎನ್‍ಆರ್‍ಎಲ್‍ಎಂ  ತಂಡವು ಫ್ಯಾಷನ್ ಶೋ, ಮೈಮ್, ಜಾನಪದ ನೃತ್ಯಗಳ ಪ್ರದರ್ಶನ ನೀಡಲಿದ್ದಾರೆ.

ಮಾರ್ಚ್ 05ರಂದು ಉತ್ಪನ್ನಗಳ ಸಿದ್ಧಪಡಿಸುವಿಕೆ ವಿಧಾನಗಳು, ಬ್ರಾಂಡಿಂಗ್ ಹಾಗೂ ಮಾರುಕಟ್ಟೆ ವಿಸ್ತರಣೆ ಮತ್ತು ಅಭಿವೃದ್ಧಿಯ ಬಗ್ಗೆ ನ್ಯಾನೋ ಮೀಡಿಯಾ ಮತ್ತು ಎಎನ್‍ಟಿಎಸ್ ಸ್ಕಿಲ್ ಸಂಸ್ಥೆ ನಡೆಸಿಕೊಡಲಿದೆ. ಫ್ಯಾಷನ್ ಶೋ. ಮೈಮ್, ಜಾನಪದ ನೃತ್ಯವನ್ನು ಸ್ವ-ಸಹಾಯ ಗುಂಪುಗಳ ಮಹಿಳಾ ಸದಸ್ಯರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಫ್ಯಾಷನ್ ಸಂಸ್ಥೆಯವರು ಪ್ರದರ್ಶನ ನೀಡಲಿದ್ದಾರೆ.

ಮಾರ್ಚ್ 06ರಂದು ಪಶುಪಾಲನೆ ಜೀವನೋಪಾಯದ ಸುಸ್ಥಿರ ಬದುಕು ಮತ್ತು ಸಮುದಾಯದ ಸಹಭಾಗಿತ್ವದ ಬಗ್ಗೆ ತರಬೇತಿ ನೀಡಲಾಗುತ್ತದೆ. ಆರ್.ವಿ. ಪದವಿ ಕಾಲೇಜು ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಲಿದ್ದಾರೆ.

ಮಾರ್ಚ್ 07ರಂದು ಬ್ಯಾಂಕಿಂಗ್ ವ್ಯವಹಾರದ ಬಗ್ಗೆ, ಹಣಕಾಸು ನಿರ್ವಹಣೆ ಮತ್ತು ವಿಧಾನಗಳ ಬಗ್ಗೆ ಎಸ್‍ಆರ್‍ಎಲ್‍ಎಂ ತಂಡ ಹಾಗೂ ಬ್ಯಾಂಕ್ ಮುಖ್ಯಸ್ಥರು ನಡೆಸಿಕೊಡಲಿದ್ದಾರೆ. ರಾಜೀವ್ ಗಾಂಧಿ ನಸಿರ್ಂಗ್ ಕಾಲೇಜು ಮತ್ತು ವೈದ್ಯಕೀಯ ಸಂಸ್ಥೆಯ ಫ್ಯಾಷನ್ ವಿಭಾಗದವರು ಫ್ಯಾಷನ್ ಶೋ, ಜಾನಪದ ಪ್ರದರ್ಶನ ನಡೆಯಲಿದೆ.

ಮಾರ್ಚ್ 08ರಂದು ಆನ್‍ಲೈನ್ ಮಾರುಕಟ್ಟೆ, ವಹಿವಾಟು, ಉತ್ಪನ್ನಗಳ ಆಕರ್ಷಕ ಮಾರಾಟದ ಬಗ್ಗೆ ಸಂವಾದ ಏರ್ಪಡಿಸಲಾಗಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿ ಸ್ವ-ಸಹಾಯ ಗುಂಪುಗಳ ಮಹಿಳೆಯರು ಯಕ್ಷಗಾನ, ಹುಲಿ ಕುಣಿತ, ಕಂಗಿಳು, ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಮಾರ್ಚ್ 09ರಂದು ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಭಿಯಾನದ ನಿರ್ದೇಶಕರು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://scoopnonstop.com/saras-mela-bengaluru-2024/

Post a Comment

0Comments

Post a Comment (0)