ಬೆಂಗಳೂರು, ಮಾರ್ಚ್ 13: ನನ್ನ ತಂದೆ ದೇವರಾಜ್ ರೆಡ್ಡಿ ಮತ್ತು ಅವರ ಸ್ನೇಹಿತ ಮತ್ತು ಶಾಸಕ ಸೂರ್ಯನಾರಾಯಣ ರೆಡ್ಡಿ ಇಬ್ಬರೂ ಪಾಲುದಾರಿಕೆಯಲ್ಲಿ ಶ್ರೀ ರಾಘವೇಂದ್ರ ಎಂಟರ್ ಪ್ರೈಸಸ್ ಸಂಸ್ಥೆ ನಡೆಸುತ್ತಿದ್ದು ನಮ್ಮ ತಂದೆ ನಿಧಾರಾದ ಮೇಲೆ ಸೂರ್ಯನಾರಾಯಣ ರೆಡ್ಡಿ ನಮಗೆ ಅದ ಅನ್ಯಾಯ ವಾಗಿದೆ ಎಂದು ತಿಳಿಯುತ್ತದೆ ಎಂದು ಬಳ್ಳಾರಿ ನಿವಾಸಿ
ಎನ್.ಅರುಣಾರೆಡ್ಡಿ ಆರೋಪಿಸಿದರು.
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಈ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ತಂದೆಯವರು ಅಕಾಲಿಕವಾಗಿ ಮರಣ ಹೊಂದಿದರು ಮತ್ತು ಪಾಲುದಾರರಾಗಿದ್ದ ನಮ್ಮ ತಂದೆಯರವರು ಎಷ್ಟು ಹಣ ಹೂಡಿಕೆ ಮತ್ತು ಜಮೀನು ಹೊಂದಿದ್ದರು ಎಂದು ನಮಗೆ ತಿಳಿದಿರಲಿಲ್ಲ.
ಅದರೆ ಅದಾಯ ತೆರಿಗೆ ಇಲಾಖೆ ವತಿಯಿಂದ ನಮ್ಮ ಆಸ್ತಿ ವಿವರದ ಬಗ್ಗೆ ತಿಳಿಯುತ್ತದೆ. ನಮ್ಮ ತಂದೆಯವರಿಗೆ ಸೇರಿದ್ದ ದಾಖಲೆಗಳನ್ನು ಪೋರ್ಜರಿ ಮಾಡಿದ್ದಾರೆ ಎಂದು ಸೂರ್ಯನಾರಾಯಣ್ ಅವರ ವಿರುದ್ಧ ಆರೋಪ ಮಾಡಿದರು
ನ್ಯಾಯ ಹೇಳಲು ಹೋದರೆ ನಮ್ಮ ಮೇಲೆ ಪ್ರಾಣದ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎನ್ ಸೂರ್ಯನಾರಾಯಣ ರೆಡ್ಡಿ, ಎನ್. ಭರತ್ ರೆಡ್ಡಿ, ಎನ್ ಶರತ್ ರೆಡ್ಡಿ ಮತ್ತು ಅವರ ಕುಟುಂಬದವರು ಎನ್ ಪೂರ್ಣಿಮಾ, ಅರುಣಾ ರೆಡ್ಡಿ, ಸಿ ಸುನೀಲ್ ಕುಮಾರ್, ಎನ್ ಕವಿತಾ ಮತ್ತು ಎನ್. ಶಾರದಾ ಅವರ ಕುಟುಂಬದವರು ಫೋರ್ಜರಿ, ಮೋಸ ಮಾಡಿದ್ದು ಈ ಕುರಿತು ವಕೀಲರಾದ ಆರ್. ಪಾಂಡು, ಟಿ ಹನುಮರೆಡ್ಡಿ ಮತ್ತು ನೀರಜ್ ರಾಜೀವ್ ಶಿವಮ್ ಅವರು ಪತ್ರಿಕಾಗೋಷ್ಠಿ ನಡೆಸಿ, ದಾಖಲೆ ಬಿಡುಗಡೆಗೊಳಿಸಿದರು
0 Comments