Ticker

6/recent/ticker-posts

Ad Code

Responsive Advertisement

ಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ; ನೈಟ್ ವಾಚಮನ್ ಕೂಡ: ಮುಖ್ಯಮಂತ್ರಿ ಬೊಮ್ಮಾಯಿ‌

ಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ; ನೈಟ್ ವಾಚಮನ್ ಕೂಡ ಹೌದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಬೆಂಗಳೂರು: ಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ. ನೈಟ್ ವಾಚಮನ್ ಕೂಡ. ಆ ರೀತಿಯ ಕೆಲಸವನ್ನು ನೀವು ಮಾಡಿದ್ದಿರಿ. ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ನಗರದಲ್ಲಿ ಕರ್ನಾಟಕ ಮಾದ್ಯಮ ಅಕಾಡೆಮಿಯ ಮತ್ತು ವಾರ್ತಾ ಇಲಾಖೆಯ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಪ್ರಶಸ್ತಿ ಸಿಗುವಂತಹದ್ದು ಇನ್ನಷ್ಟು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಲಿ ಅಂತ ಎನ್ನುವುದು ನನ್ನ ಭಾವನೆ. ನೀವು ಒಳ್ಳೆಯ ಕೆಲಸ ಮಾಡಿದ್ದಕ್ಕೆ ಗುರುತಿಸಿರುತ್ತಾರೆ. ಪ್ರಶಸ್ತಿಯ ಪಾವಿತ್ರ್ಯತೆ ಹೇಗೆ ಇದೆ ಎಂದರೆ, ನಿಮ್ಮ ವೃತ್ತಿಧರ್ಮವನ್ನು ಇನ್ನಷ್ಟು ಗಟ್ಟಿಯಾಗಿ ಪ್ರದಿಪಾದಿಸಬೇಕು ಅಂತ ಎಂದು ಸಿಎಂ ಬೊಮ್ಮಾಯಿ‌ ಅವರು ಹೇಳಿದರು.

ಪತ್ರಿಕೋದ್ಯಮ ಬಹಳ ಹೆಳೆಯ ವೃತ್ತಿ. ವಿಶ್ವದ ನಾಗರಿಕತೆಯ ಬೆಳವಣಿಗೆಯಲ್ಲಿ ಬಹಳ ದೊಡ್ಡ ಪಾತ್ರವಿದೆ. ತಂತ್ರಜ್ಞಾನ ಹೆಚ್ಚಾದಂತೆ ಪತ್ರಿಕೋದ್ಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಅದರಲ್ಲೂ ವಿಶ್ವಯುದ್ಧ 1 ಮತ್ತು 2 ರ ಬಳಿಕ ಮಷೀನ್ ಮ್ಯಾನುಫ್ಯಾಕ್ಚುರಿಂಗ್  ಮತ್ತು ಪತ್ರಿಕೋದ್ಯಮದಲ್ಲಿ ಬಹಳ ಬದಲಾವಣೆ ಆಗಿದೆ. ವರ್ಡ್ ಆರ್ಡರ್ ಕೂಡ ಬದಲಾವಣೆ ಆಗಿದೆ. ಭಾರತದಲ್ಲಿ ಸ್ವಾತಂತ್ರ್ಯ ‌ಪೂರ್ವದ ಪತ್ರಿಕೋದ್ಯಮ ಹಾಗೂ ಸ್ವಾತಂತ್ರ್ಯ ‌ನಂತರದ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಪತ್ರಿಕೋದ್ಯಮ ಪಾತ್ರ ಮುಖ್ಯವಾಗಿದೆ. ಅದೊಂದು ಸುವರ್ಣಯುಗ ಎಂದರು.

ಪ್ರಜಾಪ್ರಭುತ್ವ ಇರಬೇಕಾಗಿರುವುದು ನ್ಯಾಯಾಂಗ, ಶಾಸಕಾಂಗ ಮತ್ತು ಪತ್ರಿಕೋದ್ಯಮದಲ್ಲಿ. ಕಾಲ ಕಾಲಕ್ಕೆ ಪರಿಣಾಮಕಾರಿ ಕಾನೂನು ಮಾಡಿ ಅದಕ್ಕೆ ತಕ್ಕ ಹಾಗೆ ನ್ಯಾಯಾಂಗ ಕಾರ್ಯವನ್ನು ಮಾಡಿದೆ. ಕಾನೂನಿನ ಹೊರತಾಗಿ ಸ್ವತಂತ್ರವಾಗಿ ಕೆಲಸ ಮಾಡಿದ್ದು ಪತ್ರಿಕೋದ್ಯಮ. ಇಲ್ಲಿ ಪ್ರಶಸ್ತಿ ಪಡೆದ ಬಹುತೇಕರು ಮೂವತ್ತು ವರ್ಷದಿಂದ ಪರಿಚಯ. ಅವರು ಎಷ್ಟೊಂದು ಕಷ್ಟ ಪಟ್ಟು ಸುದ್ದಿ ಸಂಗ್ರಹಿಸುತ್ತಿದ್ದರು ಎನ್ನುವುದು ನನಗೆ ಅರಿವಿದೆ ಎಂದರು.

ಧಾರವಾಡ, ರಾಯಚೂರು, ಮೈಸೂರಿನಲ್ಲಿ ಕೆಲಸ ಮಾಡುವ ಪತ್ರಕರ್ತರು ಎಷ್ಟು ಕೆಲಸ ಮಾಡುತ್ತಾರೆ ಎನ್ನುವುದು ನನಗೆ ಗೊತ್ತು. ವಿಜಯ ಸಂಕೇಶ್ವರ ಅವರ ಹೊಸ ಪ್ರಯತ್ನ, ಜನರ ಧ್ವನಿಯಾಗಿ ಕೆಲಸ ಮಾಡುವ ರಂಗಣ್ಣ. ಮಾಧ್ಯಮ ಅಕಾಡೆಮಿ ಕೇವಲ ಪ್ರಶಸ್ತಿ ಕೊಡುವ ಕೆಲಸ ಮಾಡದೇ, ಸಂಶೋದನೆ, ಹೊಸ ಪತ್ರಕರ್ತರಿಗೆ ಪ್ರೋತ್ಸಾಹ, ತಾಲ್ಲೂಕು, ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಹೆಚ್ಚಿನ ಪ್ರೊತ್ಸಾಹ ನೀಡಬೇಕು ಎಂದರು.

ಪತ್ರಿಕೋದ್ಯಮ ಹಾಗೂ ರಾಜಕಾರಣಿಗಳ ಸಂಬಂಧ ಅವಿನಾಭಾವ ಸಂಬಂಧ. ರಾಜಕೀಯ ಇಲ್ಲದೆ ಪತ್ರಿಕೆಗಳು ನಡೆಯುವುದಿಲ್ಲ. ಪತ್ರಿಕೆಗಳಿಲ್ಲದೇ ರಾಜಕಾರಣಿಗಳಿಲ್ಲ. 

ಪತ್ರಿಕೆಗಳು ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡಿ, ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವ ಆರ್. ಅಶೋಕ ಹಾಗೂ ಉದ್ಯಮಿ ವಿಜಯ ಸಂಕೇಶ್ವರ್, ಡಾ. ಸುಧಾಮೂರ್ತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಸೇರಿದಂತೆ ಇತರರಿದ್ದರು.

Post a Comment

0 Comments

Ad Code

Responsive Advertisement