Ticker

6/recent/ticker-posts

Ad Code

Responsive Advertisement

ಜ್ಞಾನಭಾರತಿ ಬಡಾವಣೆಯ ಮಹಿಳೆಯರಿಗಾಗಿ ಮೈಸೂರು ಪ್ರವಾಸ

ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ಜ್ಞಾನಭಾರತಿ ಬಡಾವಣೆಯ ಮಹಿಳೆಯರಿಗಾಗಿ ಒಂದು ದಿನದ ಮೈಸೂರಿನ ಧಾರ್ಮಿಕ ಕ್ಷೇತ್ರಗಳ  ಪ್ರವಾಸವನ್ನು ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್.ಟಿ. ಸೋಮಶೇಖರ್ ರವರ ವತಿಯಿಂದ ಆಯೋಜಿಸಲಾಗಿತ್ತು, ಈ ಒಂದು ದಿನದ ಯಾತ್ರೆಯಲ್ಲಿ ಮೈಸೂರು ಹಾಗೂ ಸುತ್ತುಮುತ್ತಲಿನ ಸುಮಾರು ಆರು ದೇವಸ್ಥಾನಗಳಿಗೆ ಭೇಟಿ ನೀಡುವ ಹಾಗೂ ದೇವರ ದರ್ಶನ ಭಾಗ್ಯದ ಅವಕಾಶವನ್ನು ಕಲ್ಪಿಸುವುದರೊಂದಿಗೆ, ಯಾತ್ರಿಕರೆಲ್ಲರಿಗೂ ತಿಂಡಿ ಹಾಗೂ ಊಟೋಪಚಾರಗಳನ್ನು ಕುಡಿಯುವ ನೀರು, ಕಾಫಿ-ಟೀ ವ್ಯವಸ್ಥೆಯನ್ನು ಸಹ ಅಚ್ಚುಕಟ್ಟಾಗಿ  ವ್ಯವಸ್ಥೆ ಮಾಡಲಾಗಿತ್ತು. ಮಾನ್ಯ ಸಚಿವರು ತಮ್ಮ ಕ್ಷೇತ್ರದ ಎಲ್ಲಾ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಸದಸ್ಯರು, ಎಲ್ಲಾ ಸಿಬ್ಬಂದಿಗಳು  ಹಾಗೂ ಶಾಲಾ ಮಕ್ಕಳಿಗೂ ಧಾರ್ಮಿಕ, ಶೈಕ್ಷಣಿಕ ಹಾಗೂ ಮನೋರಂಜನಾ ಪ್ರವಾಸಗಳನ್ನು ಆಗಿಂದಾಗ್ಯೆ ಏರ್ಪಡಿಸುತ್ತಾ ಬಂದಿರುವುದು ಈ ಕ್ಷೇತ್ರದ ಜನರಿಗೆ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಾಮಾನ್ಯ  ಯಾತ್ರಾ-ಪ್ರವಾಸ ಕಾರ್ಯಕ್ರಮವಾಗಿದ್ದು, ಇತ್ತೀಚಿನ ಮೈಸೂರು ಪ್ರವಾಸಕ್ಕೆ 50 ಜನ ಮಹಿಳೆಯರೆಲ್ಲರೂ, ಕುಟುಂಬಗಳಲ್ಲಿ ಅವಿರತವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಗೃಹಿಣಿಯರಾಗಿದ್ದು, ಯಾತ್ರಾರ್ಥಿಗಳಾಗಿ ದರ್ಶನ ಪಡೆದು ಸಂತಸದಿಂದ ಹಿಂದಿರುಗಿದ್ದಾರೆ.ಈ ಪ್ರವಾಸವನ್ನು ಆಯೋಜಿಸಲು ಸಹಕರಿಸಿದ ಹೇರೋಹಳ್ಳಿ ವಾರ್ಡಿನ ಬಿಜೆಪಿ ಮುಖಂಡರಾದ  ರೇವಣ್ಣ, ಚೇತನ,  ಶಬರೀಶ್ ಮುಂತಾದವರಿಗೆ, ಜ್ಞಾನಭಾರತಿ ಬಡಾವಣೆಯ ಮಹಿಳೆಯರು ಮಾನ್ಯ ಸಚಿವರು ಹಾಗೂ ಈ  ಪ್ರವಾಸ ಕಾರ್ಯಕ್ರಮಕ್ಕೆ ಅಗತ್ಯವಾದ ನೆರವು ಹಾಗೂ  ಸಿದ್ಧತೆಗಳನ್ನು ಮಾಡಿಕೊಟ್ಟಿದ್ದ ಎಲ್ಲರಿಗೂ  ಅಭಿನಂದನೆ ಸಲ್ಲಿಸಿದರು,  ಈ ಪ್ರವಾಸದ ಮೇಲುಸ್ತುವಾರಿ ಹಾಗೂ ನೇತೃತ್ವವನ್ನು ಬಿಜೆಪಿ ಪಕ್ಷದ ಫಲಾನುಭವಿ ಪ್ರಕೋಷ್ಠದ ಬೆಂಗಳೂರು ಉತ್ತರ ಜಿಲ್ಲಾ ಸದಸ್ಯರಾದ ಶ್ರೀಮತಿ ಆಶಾ ಲೋಹಿತ್ ರವರು ವಹಿಸಿಕೊಂಡು ಎಲ್ಲರ ಸಹಕಾರದೊಂದಿಗೆ ಪ್ರವಾಸವನ್ನು ಯಶಸ್ವಿಗೊಳಿಸುವಲ್ಲಿ ಸಫಲರಾಗಿರುತ್ತಾರೆ.

Post a Comment

0 Comments

Ad Code

Responsive Advertisement