ಆಯುಷ್ಯ ಬೇಕೆಂದರೆ ಆಯುರ್ವೇದ ಬಳಸಿ: ಡಾ.ಶ್ರೀಶೈಲ ಬದಾಮಿ:

ಜನ ಸಾಮಾನ್ಯರು ತಮ್ಮ ಆಯುಷ್ಯವನ್ನು ಗಟ್ಟಿಗೊಳಿಸಿಕೊಳ್ಳಲು ಆಯುರ್ವೇದ ಔಷಧವನ್ನು ಬಳಸಬೇಕು,ಆಯುರ್ವೇದ ವೈಧ್ಯರು ಆಯುರ್ವೇದ ಔಷಧಗಳನ್ನು ಮಾತ್ರ ಸೂಚಿಸಬೇಕೆಂದು ಪರಿಸರ ಮತ್ತು ಔಷಧ ತಜ್ಞ ಡಾ.ಶ್ರೀಶೈಲ ಬದಾಮಿ ಕರೆ ನೀಡಿದರು.

ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಔಷಧೀಯ ಭವನದಲ್ಲಿ ಕೇವಾ ಕೈಪೊ ಆಯುರ್ವೇದ ಕಂಪನಿಯವರು ಆಯೋಜಿಸಿದ್ದ "ಆಯುರ್ವೇದ ಮತ್ತೇ ಪ್ರಸಿದ್ದಿ ಪಡೆಯುತ್ತಿದೆಯೇ ?" ಎಂಬ ವಿಷಯದ ಮೇಲೆ ನಡೆದ ಉಪನ್ಯಾಸ ಮಾಲಿಕೆಯಲ್ಲಿ  ಮಾತನಾಡುತ್ತಿದ್ದರು.

ಚೈನಾ ದೇಶದಲ್ಲಿ 30% ಆಯುರ್ವೇದ ಗಿಡ ಮೂಲಿಕೆಗಳಿದ್ದರೂ ಆಯುರ್ವೇದ ಉತ್ಪನ್ನಗಳ ತಯಾರಿಕೆ ಮತ್ತು ರಫ಼್ತಿನಲ್ಲಿ ಆ ದೇಶ ಮುಂದಿದೆ.ಆದರೆ ಭಾರತ ದೇಶದಲ್ಲಿ 70% ಗಿಡ ಮೂಲಿಕೆಗಳಿದ್ದರೂ ಆಯುರ್ವೇದ ತಯಾರಿಕೆ ಮತ್ತು ಮಾರಾಟದಲ್ಲಿ ಹಿಂದುಳಿದಿದೆ.ಇದಕ್ಕೆಲ್ಲಾ ನಮ್ಮ ದೇಶದಲ್ಲಿ ಉಳಿದುಕೊಂಡಿರುವ ಬ್ರಿಟಿಷ್ ಪಾಲ್ಸಿಯೇ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು.

ಆಹಾರ ಪದಾರ್ಥ,ತಂಪು ಪಾನಿಯ,ಮನೆ ಬಳಕೆಯ ವಸ್ತುಗಳು,ವಯಕ್ತಿಕ ಬಳಕೆಯ ವಸ್ತುಗಳು,ಔಷಧ ಮುಂತಾದ ವಿಷಮಯವಾದ ವಿದೇಶಿ ಉತ್ಪನ್ನಗಳನ್ನು ನಾವು ದಿನ ನಿತ್ಯ ಬಳಸುತ್ತಿದ್ದೇವೆ.ಆದರೆ ಇಂತಹ ವಸ್ತುಗಳನ್ನು ವಿದೇಶದವರು ತಯಾರಿಸುತ್ತಾರೆ, ಆದರೆ ಅವರು ಬಳಸುವುದಿಲ್ಲ ಎಂದವರು ತಿಳಿಸಿದರು.

ದೇಹದ ಎಲ್ಲಾ ಭಾಗಗಳಿಗೂ ಒಬ್ಬೊಬ್ಬ ಅಲೋಪತಿ ಪದ್ದತಿಯ ತಜ್ಞ ವೈದ್ಯರಿದ್ದಾರೆ.ಅವರೆಲ್ಲರೂ ನಮ್ಮ ದೇಹದ ಭಾಗಗಳನ್ನು ಆರಿಸಿಕೊಂಡು ಬಿಟ್ಟಿದ್ದಾರೆ. ದೇಹದ ಒಂದು ಭಾಗವನ್ನು ರಕ್ಷಿಸಲು ಹೋಗಿ ಮತ್ತೊಂದು ಭಾಗವನ್ನು ನಾವು ಕೆಡಿಸಿಕೊಳ್ಳುತ್ತಿದ್ದೇವೆ. ಅಲೋಪತಿ ಪದ್ದತಿಯಲ್ಲಿನ ಔಷಧಗಳು ಆರೋಗ್ಯದ ಮೇಲೆ ಕೆಲವೇ ಕೆಲವು ಅವಧಿಗೆ ಪರಿಹಾರ ನೀಡಬಹುದಾದರೂ,ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ.ಅದಕ್ಕಾಗಿ ತುರ್ತಾಗಿ ಚಿಕಿತ್ಸೆ ಬೇಕಿಲ್ಲದ ರೋಗಗಳಿಗಾದರೂ ಆಯುರ್ವೇದ ಔಷಧಗಳನ್ನು ಬಳಸಬೇಕು.ಹಲವು ಆಯುರ್ವೇದ ಔಷಧಗಳು ವಿದೇಶದಲ್ಲಿ ತಯಾರಾಗಿ ಭಾರತಕ್ಕೆ ಬರುತ್ತಿವೆ,ಇದಕ್ಕಿಂತ ನಾಚಿಕೆಯಾದ ವಿಷಯ ಬೇರೊಂದಿಲ್ಲ ಎಂದು ಅಭಿಪ್ರಾಯ ಪಟ್ಟರು.

ರಾಜ್ಯ ಔಷಧ ತಜ್ಞರ ಸಂಘದ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಮಾತನಾಡಿ,ಭಾರತ ದೇಶದ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಲು ಮತ್ತು ದೇಶಿಯ ಆಯುರ್ವೇದ ಪದ್ದತಿಯನ್ನು ಉಳಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಕೋರಿದರು.

ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ.ವೀರನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಮೇಲೆ ಡಾ.ಬಸವರಾಜ ಅಯೊಧ್ಯಾ ,ಡಾ.ಎ.ಎ.ಜೀಡಿ, ಡಾ.ನಾಗರಾಜ ಗುಡ್ಲಾನೂರ,ಡಾ.ಸುನಿಲ್ ಅರಳಿ, ಡಾ.ಆಭೀದ್ ಹುಸೈನ್,ಫ಼ಾರ್ಮಸಿ ಕಾಲೇಜ್ ಪ್ರಿನ್ಸಿಪಾಲ್ ಮಂಜುನಾಥ ಹಿರೇಮಠ ಮತ್ತು ಕೇವಾ ಕಂಪನಿಯ ಮುಖ್ಯಸ್ಥ ವಿಜಯ ಕುಮಾರ್ ಆಸೀನರಾಗಿದ್ದರು.

ಕಾರ್ಯಕ್ರಮದಲ್ಲಿ ಅಜಯ ಕುಮಾರ್ ಕೇವಾ ಕಂಪನಿಯ ಉತ್ಪನ್ನಗಳನ್ನು ಪರಿಚಯಿಸಿದರು.ರಮೇಶ ಕುಮಾರ್,ಮಹಾಂತೇಶ್ ಹಿರೇಮಠ ಸೇರಿದಂತೆ ಆಯುಷ್ ವೈದ್ಯರು, ಫ಼ಾರ್ಮಸಿಸ್ಟಗಳು,ಔಷಧ ವ್ಯಾಪಾರಿಗಳು ಹಾಜರಿದ್ದರು.

Post a Comment

0 Comments