Ticker

6/recent/ticker-posts

Ad Code

Responsive Advertisement

ಒಂದೇ ಕುಟುಂಬದ ಮೂರು ಜನ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ: ಬೆಳ್ಳಂ ಬೆಳಗ್ಗೆ ಒಂದೇ ಕುಟುಂಬದ ಮೂರು ಜನ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. 




ಮಗಳು ಅರ್ಚನಾ ಅನ್ಯ ಜಾತಿಯ ಹುಡುಗನ ಜೊತೆ ನಾಪತ್ತೆಯಾಗಿದ್ದಾಳೆಂದು ಸೋಮವಾರ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ ಆದರೆ ಮಗಳು ಬಾರದ ಕಾರಣ ಮರ್ಯಾದೆಗೆ ಅಂಜಿ ಇಡೀ ಕುಟುಂಬವೇ ಸಾವಿನ ಹಾದಿಯನ್ನು ಕಂಡುಕೊಂಡಿದ್ದು ತಂದೆ ಶ್ರೀರಾಮಪ್ಪ(63), ತಾಯಿ ಸರೋಜಮ್ಮ(60),ಸಹೋದರ ಮನೋಜ್(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅದೇ ಗ್ರಾಮದ ಹುಡುಗ ನಾರಾಯಣಸ್ವಾಮಿ ಎಂಬ ಯುವಕನ ಜೊತೆ ಪರಾರಿಯಾಗಿದ್ದಾಳೆಂದು ಗ್ರಾಮಸ್ಥರ ಮಾತಾಗಿದೆ. 

ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತಂದೆ ಶ್ರೀರಾಮಪ್ಪ ಡೆತ್ ನೋಟ್ ಬರೆದು ನಮ್ಮ ಸಾವಿಗೆ ನನ್ನ ಮಗಳೇ ಕಾರಣ ನನ್ನ ಮಗಳು ಅಂತರ್ಜಾತಿ ಹುಡುಗನ ಜೊತೆ ಹೋಗಿದ್ದರಿಂದ ನಮ್ಮ ಮರ್ಯಾದೆ ಹೋಗಿದೆ ಆದ್ದರಿಂದ ನಾವು ಸಾಯುತ್ತಿದ್ದೇವೆ ಪೋಲಿಸರಿಗೆ ನನ್ನ ಮನವಿ ಏನೆಂದರೆ ನನ್ನ ಮಗಳಾದ ಅರ್ಚನಾಗೆ ಮತ್ತು ನನ್ನ ಆಸ್ತಿಗೆ ಯಾವುದೇ ಸಂಭಂದ ಇರುವುದಿಲ್ಲ ಎಂದು ಅರ್ಚನಾ ಬಳಿ ಬರೆಸಿಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀರಾಮಪ್ಪ ರವರಿಗೆ ಮೂರು ಜನ ಮಕ್ಕಳಿದ್ದು ಅವರನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡಿದ್ದರು.ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು ಮಗಳು ಇದ್ದರು.

ಆಸ್ಪತ್ರೆಗೆ ಬೇಟಿ ನೀಡಿದ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ ಶ್ರೀರಾಮಪ್ಪ ನಾನು ಒಂದೇ ತರಗತಿಯಲ್ಲಿ ಓದುತ್ತಿದ್ದೆವು ಅವನು ಯಾರ ತಂಟೆಗೂ ಹೋಗುವವನಲ್ಲ ಅವನ ಕುಟುಂಬಕ್ಕೆ ಈತರ ನಡೆಯಬಾರದಿತ್ತು, ತುಂಬಾ ಕೆಟ್ಟ ನಿರ್ಣಯವನ್ನು ತೆಗೆದುಕೊಂಡಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ಗ್ರಾಮಂತರ ಪೋಲೀಸರು ಬೇಟಿ ನೀಡಿ ಸ್ಥಳ ಮಹಜರು ಮಾಡಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Post a Comment

0 Comments

Ad Code

Responsive Advertisement