ಅಪಾಯದಲ್ಲಿರುವ ಗ್ರಾಮ ನಿವಾಸಿಗಳ ಜೀವ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು...


ವಾರ್ತಾ ಜಾಲ ಸುದ್ದಿ ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಬಾಲ್ಯ ಗ್ರಾಮದಲ್ಲಿ ಸುಮಾರು 20ರಿಂದ 30 ವರ್ಷ ಕಳೆದಿರುವ ನೀರಿನ ಸ್ಥಾವರ ಬಿದ್ದು ಹೋಗುವ  ಪರಿಸ್ಥಿತಿಯಲ್ಲಿದ್ದರೂ ಕೂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು ಕಣ್ಣಿಗೆ ಕಾಣದ ಹಾಗೆ ಓಡಾಡುತ್ತಿರುವ ಪರಿಸ್ಥಿತಿ ಉಂಟಾಗಿದೆ, ಅದರ ಕೆಳಗೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು  ಸಮೇತ ಓಡಾಡುತ್ತಿರುತ್ತಾರೆ, ಓವರ್ ಟ್ಯಾಂಕ್ ಸುತ್ತ ಮುತ್ತಲಿರುವ   ಮನೆಯವರು ಸುಮಾರು ಎರಡು ವರ್ಷದಿಂದ ಮನೆ ಖಾಲಿ ಮಾಡಿ ಹೊರಗಡೆ ಬಾಡಿಗೆ ಮನೆಯಲ್ಲಿ ವಾಸ ಇರುತ್ತಾರೆ, ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಈ ನೀರಿನ ಸ್ಥಾವರವನ್ನು ದುರಸ್ತಿ ಮಾಡಿಸಿಕೊಡಿ ಎಂದು ಗ್ರಾಮಸ್ಥರು ಸುಮಾರು ಬಾರಿ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟರು ಸಹ ಅಧಿಕಾರಿಗಳು ಗ್ರಾಮಸ್ಥರಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.


ನಂತರ ಸ್ಥಳೀಯ ನಿವಾಸಿ ಹನುಮಕ್ಕ ಮಾತನಾಡಿ ನಾನು ಈ ಗ್ರಾಮದ ಸ್ಥಳೀಯ ನಿವಾಸಿ ಈ  ಓವರ್ ಟ್ಯಾಂಕ್ ಸುಮಾರು 38 ವರ್ಷಗಳ ಹಿಂದೆ ನಿರ್ಮಾಣವಾಗಿರುತ್ತದೆ,

ನಿರ್ಮಾಣವಾದ ಕೆಲವೇ ವರ್ಷಗಳು ಮಾತ್ರ ಚಾಲನೆಯಲ್ಲಿದ್ದು,ಕಳಪೆ  ಕಾಮಗಾರಿಯಿಂದ ನಿರ್ಮಾಣವಾದ  ಓವರ್ ಟ್ಯಾಂಕ್ ಸುಮಾರು 20 ವರ್ಷಗಳಿಂದ   ಶೀತಲ ವ್ಯವಸ್ಥೆಯಲ್ಲಿದೆ, ಯಾವ ಸಮಯಕ್ಕೆ ಆದರೂ ಕೆಳಗೆ  ಉರುಳಬಹುದು,  ಸುತ್ತಮುತ್ತಲಿನ ನಿವಾಸಿಗಳು ಈಗಾಗಲೇ ಭಯದಿಂದ ತಮ್ಮ ಸ್ವಂತ ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆ ಮನೆಗಳಿಗೆ ಸ್ಥಳಾಂತರ ವಾಗಿದ್ದಾರೆ, ಗ್ರಾಮಸ್ಥರು ಹಲವಾರು ಬಾರಿ ಪಂಚಾಯಿತಿಗೆ ದೂರು ಕೊಟ್ಟರೂ ಸಹ ಅಧಿಕಾರಿಗಳು ಗಮನ ಹರಿಸದೆ  ಗ್ರಾಮ ನಿವಾಸಿಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ, ಕಳೆದ ವರ್ಷ ದಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅರ್ಜಿಯನ್ನು ಸಲ್ಲಿಸಿದರು ಪ್ರಯೋಜನ ಇಲ್ಲ, ಈಗಲೂ ಕೂಡ ಮತ್ತೆ ಗ್ರಾಮ ವಾಸ್ತವ್ಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇವೆ ಈಗಲಾದರೂ ಮೇಲಾಧಿಕಾರಿಗಳು ಕೂಡಲೇ ಕ್ರಮವಹಿಸಿ ನಿವಾಸಿಗಳ ಕಷ್ಟ ಆಲಿಸಿ ಎಂದು ಮನವಿ ಮಾಡಿದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments