ಪ್ರತಿಯೊಬ್ಬ ಯೋಧ ದೇಶದ ಹೆಮ್ಮೆ; ಯೋಧರನ್ನು ಗೌರವಿಸಿ ಸತ್ಕರಿಸಬೇಕಿರೋದು ನಮ್ಮೆಲ್ಲರ ಆದ್ಯ ಕರ್ತವ್ಯ

ತೂಬಗೆರೆ: ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಅವರು ತೂಬಗೆರೆಯಲ್ಲಿ ಸಿ ಆರ್ ಪಿ ಎಫ್ ಯೋಧರಾದ ಅನಂತ ರಾಜಗೋಪಾಲ್ ರವರ ಮನೆಗೆ ಭೇಟಿ ನೀಡಿ ಸರ್ಕಾರದಿಂದ ಮಂಜೂರಾದ  ಖಾಲಿ ನಿವೇಶನ ಹಕ್ಕುಪತ್ರ ವಿತರಿಸಿ, ಪ್ರತಿಯೊಬ್ಬ ಯೋಧ ಈ ದೇಶದ ಹೆಮ್ಮೆ, ಯೋಧರನ್ನು ಗೌರವಿಸಿ ಸತ್ಕರಿಸಬೇಕಿರೋದು ನಮ್ಮೆಲ್ಲರ ಆದ್ಯ ಕರ್ತವ್ಯ. ಸುಮಾರು ಹತ್ತು ವರ್ಷಗಳ ನಂತರ ತಾಲೂಕಿನ ನಿವೇಶನ ರಹಿತರಿಗೆ  ಮತ್ತೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ದೊರೆತಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀನಾಥ್ ಗೌಡ ಅವರ ಕಾಳಜಿಯಿಂದ ಸುಮಾರು ಹತ್ತು ವರ್ಷಗಳ ನಂತರ ತಾಲೂಕಿನ 26 ಎಕರೆ ಜಮೀನು ಸರ್ವೆ ಮತ್ತು ಬಡಾವಣೆ ನಕ್ಷೆ ಮಾಡಿಕೊಟ್ಟಿದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನ ರೈತರನ್ನು ಆಯ್ಕೆ ಮಾಡಿ ಈ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು ಒಂದು ಸಾವಿರ ನಿವೇಶನ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ  ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಯಣ್ಣ ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಬಾಬು ಉಪಾಧ್ಯಕ್ಷೆ ನಾಗಮ್ಮ ಪಿಡಿಓ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀನಾಥ್ ಗೌಡ ನೋಡಲ್ ಅಧಿಕಾರಿ ರಾಮಕೃಷ್ಣ  ಜೆಡಿಎಸ್ ಮುಖಂಡರಾದ ಮಧು, ಮುರಳಿ ಮಂಜುನಾಥ್, ಗೌರೀಶ್, ಉದಯ್ ಆರಾಧ್ಯ, ವಿ ಎಸ್ ಎಸ್ ಎನ್ ಸದಸ್ಯರಾದ ಸುಬ್ರಹ್ಮಣ್ಯ ಗ್ರಾಮದ ಮುಖಂಡರಾದ ನಕದಾಸ ಮುನಿಕೃಷ್ಣಪ್ಪ ವೆಂಕಟೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

Post a Comment

0 Comments