ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದಸರಾ ಮಹೋತ್ಸವ

ನಾಗರಬಾವಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ  ದಸರಾ ಪ್ರಯುಕ್ತ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಪ್ರತಿದಿನ ವಿಶೇಷ ಅಲಂಕಾರ, ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಸೆಪ್ಟೆಂಬರ್ 26 --  ಹರಿದ್ರಾ-ಕುಂಕುಮ ಅಲಂಕಾರ, ಶ್ರೀಮತಿ ಶ್ರೀದೇವಿ ಬಿ. ಮತ್ತು ತಂಡದವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", 

ಸೆಪ್ಟೆಂಬರ್ 27 --  ನವನೀತ ಅಲಂಕಾರ, ಕೆನರಾ ಬ್ಯಾಂಕ್ ಕಾಲೋನಿಯ ಮಹಿಳಾ ಮಂಡಲಿ ಸದಸ್ಯರಿಂದ "ಸಾಂಸ್ಕೃತಿಕ ಕಾರ್ಯಕ್ರಮಗಳು",

ಸೆಪ್ಟೆಂಬರ್ 28 --  ತರಕಾರಿ ಅಲಂಕಾರ, ಶ್ರೀಮತಿ ಸುಷ್ಮಾ ಸಂತೋಷ್ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ"

ಸೆಪ್ಟೆಂಬರ್ 29 --  ಕೊಬ್ಬರಿ ತುರಿ ಅಲಂಕಾರ, ಶ್ರೀ ಹಿರೇಮಗಳೂರು ಪ್ರದೀಪ್ ಮತ್ತು ತಂಡದವರಿಂದ "ಭಕ್ತಿ ಗೀತೆಗಳು"

ಸೆಪ್ಟೆಂಬರ್ 30 --  ಶ್ರೀಗಂಧ ಅಲಂಕಾರ, ಶ್ರೀಮತಿ ರೂಪಾ ಪ್ರಭಂಜನ, ಶ್ರೀಮತಿ ರಮ್ಯಾ ಸುಧೀರ್ ಇವರಿಂದ "ಹರಿನಾಮ ಸಂಕೀರ್ತನೆ" ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಸುದರ್ಶನ್ (ತಬಲಾ)

ಕ್ಟೋಬರ್ 1 --  ಪಂಚವರ್ಣ ಅಲಂಕಾರ, ಶ್ರೀ ಶ್ರೀಹರಿ ಭಟ್ ಮತ್ತು ತಂಡದವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" 

ಅಕ್ಟೋಬರ್ 2 ---  ಚಂದನ ಅಲಂಕಾರ, ಶ್ರೀಮತಿ ಸುಪ್ರಿಯಾ ಮತ್ತು ಶ್ರೀಮತಿ ಪಿ. ಎಸ್. ಸುಕನ್ಯಾ ಇವರಿಂದ "ಭರತನಾಟ್ಯ"

 ಅಕ್ಟೋಬರ್ 3 -- ಹೂವಿನ ಅಲಂಕಾರ, "ದುರ್ಗಾಷ್ಟಮಿ"-ದುರ್ಗಾ ನಮಸ್ಕಾರ ಪೂಜೆ

 ಅಕ್ಟೋಬರ್ 4 --  ತ್ರಿವರ್ಣ ಅಲಂಕಾರ, ದೇವಸ್ಥಾನದ ಭಜನಾ ಮಂಡಳಿಯ ಸದಸ್ಯರಿಂದ "ಭಜನೆ"

ಅಕ್ಟೋಬರ್ 5 -- ರಜತ ಅಲಂಕಾರ, ಶ್ರೀ ನಾಗಚೇತನ್ ಎಸ್. ಎಂ. ಮತ್ತು ತಂಡದವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments