ಶಾಲೆಯ ಮಕ್ಕಳಿಗೆ ಹಾಗೂ ಶಾಲೆಯ ಆವರಣಕ್ಕೆ ದಕ್ಕೆ ತರುತ್ತಿರುವ ಕಸದ ತೊಟ್ಟಿ:

ವಾರ್ತಾಜಾಲ ಸುದ್ದಿ ಮಧುಗಿರಿ:ತಾಲೂಕಿನ ಕಸಬಾ ಹೋಬಳಿ ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಂದೆ ಸುಮಾರು ವರ್ಷದಿಂದ ಗ್ರಾಮ ಪಂಚಾಯಿತಿ ವತಿಯಿಂದ ಕಸದ ತೊಟ್ಟಿಯನ್ನು ಹಿಡಿಸಲಾಗಿದ್ದು ಹಲವಾರು ಬಾರಿ ಈ ಕಸದತೊಟ್ಟಿ ಭರ್ತಿಯಾಗಿ ಕಸ ಎಲ್ಲಾ ಕೆಳಗಡೆ ಬೀಳುತ್ತಿದ್ದು ಅಲ್ಲಿ ಸೊಳ್ಳೆಗಳ ಕಾಟ ಕೂಡ ಹೆಚ್ಚಿದ್ದು ಶಾಲೆ ಮಕ್ಕಳ ಆರೋಗ್ಯಕ್ಕೆ ಹಾನಿಕರ ಸೃಷ್ಟಿಯಾಗುವ ರೀತಿ ಇದೆ ಜೊತೆಗೆ ಶಾಲೆಯ ಸುಸರ್ಜಿತ ಆವರಣಕ್ಕೆ ಧಕ್ಕೆ ಉಂಟಾಗುತ್ತಿದೆ , ಶಾಲೆಯ ಮುಖ್ಯ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಮಕ್ಕಳ ಪೋಷಕರು  ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ, ಕಳೆದ ಒಂದು ವರ್ಷದಿಂದ  ಹಲವಾರು  ಬಾರಿ ಪತ್ರದ ಮುಖಾಂತರ ಅರ್ಜಿ ಕೊಟ್ಟರು ಸಹ ಪ್ರಯೋಜನವಾಗಿಲ್ಲ , ಕಣ್ಣಿಗೆ ಕಾಣದಂತೆ ಇರುವ ಅಧಿಕಾರಿಗಳು ಕಸದ ತೊಟ್ಟಿಯನ್ನು ಬೇರೆ ಕಡೆ ಸ್ಥಳಾಂತರಿಸದೇ ಇರುವುದು ನಿಜಕ್ಕೂ ಇಲ್ಲಿ ಪಂಚಾಯಿತಿಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.


ಶಾಲೆಯ ಮುಂಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿದೆ , ಇದು  ಕಬ್ಬಿಣದ ಪೈಪ್ ಲೈನ್ ಆಗಿದು ತುಂಬಾನೇ ಹಳೆಯದಾಗಿ ತುಕ್ಕು ಹಿಡಿದಿರುವುದು ಎದ್ದು ಕಾಣುತ್ತಿದೆ.    

ಶಾಲಾ ಮಕ್ಕಳು  ನಡೆದಾಡುವ ಶಾಲಾಗೇಟ್ ಮುಂಭಾಗದಲ್ಲೆ ಈ ಪೈಪ್ ಇರುವುದರಿಂದ ಮಕ್ಕಳು ಓಡಾಡುವ ಸಮಯದಲ್ಲಿ ಕಾಲಿಗೆ ತಗಲಿದರೆ ಇದರಿಂದ ಸೆಪ್ಟಿಕ್ ಆಗುವ ಲಕ್ಷಣಗಳು ಕೂಡ ಉಂಟು, ಆದ್ದರಿಂದ  ತುಕ್ಕು ಹಿಡಿದಿರುವ ನೀರಿನ ಪೈಪ್ ಅನ್ನು ಅದಷ್ಟು ಬೇಗನೆ   ಸರಿಪಡಿಸಿ ಮತ್ತು  ಮೇಲ್ಭಾಗದಲ್ಲಿ ಹಾಕಿದ್ದ  ಪೈಪ್ ಲೈನ್ ಅನ್ನು ಭೂಮಿಯ ಕೆಳಭಾಗಕ್ಕೆ ಸ್ಥಳಾಂತರಿಸಿದರೆ ಒಳ್ಳೆಯದು .

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಶಾಲೆಯ ಮುಂಭಾಗದಲ್ಲಿರುವ ಕಸದ ತೊಟ್ಟಿಯನ್ನು ಬೇರೆ ಕಡೆ ಸ್ಥಳಾಂತರಿಸಿ ಹಾಗೂ ಪೈಪ್ ಲೈನ್ ಸಮಸ್ಯೆ ಬಗೆಹರಿಸಿ ಕೊಡಿ ಎಂದು   ಶಾಲಾ ಆಡಳಿತ ಮತ್ತು ಗ್ರಾಮಸ್ಥರು ತಾಲೂಕು ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಮನವಿ ಮಾಡಿದರು.

ವರದಿ:ನಾಗೇಶ್ ಜೀವಾ.

Post a Comment

0 Comments