ನಯನ ಸಭಾಂಗಣದಲ್ಲಿ 'ನೃತ್ಯ ಸಂಹಿತಾ’ ಎಂಬ ವಿಶೇಷ ಕಾರ್ಯಕ್ರಮ ಆಯೋಜನೆ

ಬೆಂಗಳೂರಿನ ಪ್ರತಿಷ್ಠಿತ ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾಮಿಂಗ್ ಆರ್ಟ್ಸ್' ಸಂಸ್ಥೆ ಅಕ್ಟೋಬರ್ 1, ಶನಿವಾರ ಸಂಜೆ 4-30ಕ್ಕೆ  ಜೆಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ 'ನೃತ್ಯ  ಸಂಹಿತಾ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಭರತನಾಟ್ಯ ವಿದುಷಿ ಮತ್ತು ವಿದ್ವಾಂಸರ ಹಿರಿಯ ಶಿಷ್ಯೆಯರು ಈ ಕಾರ್ಯಕ್ರಮದಲ್ಲಿ ಅಮೋಘ ಕಲಾಪ್ರದರ್ಶನ ನೀಡಲಿರುವುದು ವಿಶೇಷವಾಗಿದೆ.

ಯುವ ಕಲಾ ಭಾರತೀ ವಿದುಷಿ ರೇಖಾ ರಾಜು ರವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ.

ನೃತ್ಯ ಪ್ರಸ್ತುತಿ : ಭರತನಾಟ್ಯ ಕಲಾವಿದರಾದ ರಾಗಿಣಿ, ರಕ್ಷಿತಾ ಸುಮನ್ ಏಸ್ ಮೂರ್ತಿ, ಪ್ರತಿಭಾ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳು, ನೀತಾ ಪಿ, ಶ್ರೀ ಸನ್ನಿಧಿ, ವೀಣಾ ಗಂಗಾಧರ್, ತೇಜಸ್ವಿನಿ ಸಂದೀಪ್, ಮೇಘನಾ ವೆಂಕಟ್ ಹಾಗು ತಂಡದವರು ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ.

Post a Comment

0 Comments