ಹೊಟೆಲ್ ಉದ್ಯಮಕ್ಕೆ ಪ್ರವಾಸೋದ್ಯಮದಲ್ಲಿ ಬೆಳೆಯಲು ಸಾಕಷ್ಟು ಅವಕಾಶ ಇದೆ- ಸಿಎಂ ಬೊಮ್ಮಾಯಿ

ಸೆಪ್ಟೆಂಬರ್20, ಬೆಂಗಳೂರು: ಹೊಟೆಲ್ ಉದ್ಯಮ ಅತ್ಯಂತ ಮಹತ್ವದ್ದಾಗಿದ್ದು ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಶಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.

ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ನಗರದ ಖಾಸಗೀ ಹೊಟೆಲ್ ನಲ್ಲಿ ಆಯೋಜಿಸಿದ್ದ '2022 ಫುಡ್ ಅವಾರ್ಡ್' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಜೀವಮಾನದ ಸಾಧನೆ ಮತ್ತು ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದರು. 


ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಬಂದ್ ಗೆ ಕರೆಕೊಟ್ಟ ಸಮಯದಲ್ಲಿ ಹೊಟೆಲ್ ಗಳು ಬಂದ್ ಆಗದಿದ್ದರೆ ಆ ಬಂದ್ ಯಶಸ್ವಿಯಾಗುವುದಿಲ್ಲ‌.ಎಲ್ಲರೂ ಕೆಲಸದಲ್ಲಿದ್ದಾಗ ನೀವು ಬಂದ್ ಮಾಡಿದರು ಅದು ನಿಜವಾದ ಬಂದ್ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

"ನಮ್ಮ ಮನೆಯವರು ಮನೆಯಲ್ಲಿ  ಇಲ್ಲದಿರುವಾಗ ನೀವೇ  ನಮ್ಮ ಮನೆಯವರಾಗುತ್ತೀರಿ‌. ರಾತ್ರಿ ಎಷ್ಟೇ ತಡವಾದರೂ ಹೊಟೆಲ್ ನವರು ನಮಗೆ ನಗುನಗುತ ಸೇವೆ ಕೊಡ್ತಾರೆ. ಕೊರೊನಾ ಸಂದರ್ಭದಲ್ಲಿ ನೀವು ಸಾಕಷ್ಟು ಸಮಸ್ಯೆ ಎದುರಿಸಿದ್ದೀರಿ. ಸರ್ಕಾರಕ್ಕೆ ಸಹಕಾರವನ್ನೂ ನೀಡಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಸಿಎಂ ಬೊಮ್ಮಾಯಿ ಹೇಳಿದರು‌.

ಹೊಟೆಲ್ ಉದ್ಯಮ ಯಶಸ್ವಿ ಆಗಬೇಕು ಅಂದ್ರೆ ಅದರ ಸೇವೆ ಬಹಳ ಮುಖ್ಯ. ದೊಡ್ಡ ಹೊಟೆಲ್ ಇಟ್ಟುಕೊಂಡು ಸರಿಯಾದ ಸೇವೆ ಇಲ್ಲ ಅಂದರೆ ಪ್ರಯೋಜನ ಇಲ್ಲ. ಆದ್ದರಿಂದ ಹೊಟೆಲ್ ಉದ್ಯಮಕ್ಕೆ ಉತ್ತಮ ತರಬೇತಿ ಪಡೆದಿರುವ ಕೆಲಸಗಾರರು ಬೇಕು. ಈ ನಿಟ್ಟಿನಲ್ಲಿ ಹೊಟೆಲ್ ಸೇವೆಗಳಿಗೆ ಕಾರ್ಮಿಕ ಇಲಾಖೆಯಿಂದ ಫಿನಿಷಿಂಗ್ ಸ್ಕೂಲ್ ತೆಗೆದರೆ ರಾಜ್ಯಕ್ಕೆ ಒಳ್ಳೆಯ ಹೆಸರು ಬರುತ್ತದೆ ಜತೆಗೆ ಪ್ರವಾಸೋದ್ಯಮಕ್ಕೆ ಉತ್ತಮ ಬೆಂಬಲ ಸಿಗುತ್ತದೆ‌ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಹೊಟೆಲ್ ಉದ್ಯಮಕ್ಕೆ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶ ಇದೆ. ಬೇರೆ ರಾಜ್ಯಗಳಲ್ಲಿ ಪ್ರವಾಸೊದ್ಯಮದಲ್ಲಿ ಹೊಟೆಲ್ ಗಳು ತೊಡಗಿಸಿಕೊಂಡಷ್ಟು  ಶೇ 50 ರಷ್ಟು ಕೂಡ ನಮ್ಮ ರಾಜ್ಯದಲ್ಲಿ ತೊಡಗಿಕೊಂಡಿಲ್ಲ. ನಿಮಗೆ ಏನು ಸಹಕಾರ ಬೇಕೊ ನಾನು ಕೊಡಲು ಸಿದ್ದನಿದ್ದೇನೆ. ಪ್ರವಾಸೋದ್ಯಮಕ್ಕೆ ನೀವು ಎಂಡ್ ಟು ಎಂಡ್ ಅಪ್ರೋಚ್ ನೀಡಬೇಕು. ಇದಕ್ಕೆ ಬೇಕಿರುವ ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರುವ ಕೆಲಸ ಮಾಡುತ್ತೀನಿ ಎಂದು ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.

ನೀವು ಪ್ರವಾಸೋದ್ಯಮ ಇಲಾಖೆಯೊಂದಿಗೆ ನೊಂದಣಿ ಮಾಡಿಕೊಂಡರೆ ಹೊಟೆಲ್ ಉದ್ಯಮ ಎಂದು ಪರಿಗಣಿಸುತ್ತೇನೆ ಎಂದು ಹೊಟೆಲ್ ಮಾಲೀಕರ ಬೇಡಿಕೆಗೆ ಉತ್ತರ ನೀಡಿದರು. 24 x7 ಆಹಾರ ಸರಬರಾಜಿಗೆ ಅವಕಾಶ ನೀಡುವ ಬಗ್ಗೆ ತಕ್ಷಣ ಹೇಳಲು ಆಗುವುದಿಲ್ಲ‌. ಅದು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ಇದನ್ನೂ ಆದಷ್ಟು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಹೊಟೆಲ್ ಉದ್ಯಮ ಸ್ಕೇಲ್ ಅಪ್ ಆಗಬೇಕು. ನಿಮಗೆ ಬ್ಯಾಂಕ್ ಅವರು ಸುಲಭವಾಗಿ ಸಾಲ‌ ನೀಡುತ್ತಾರೆ. ಕಠಿಣ ಶ್ರಮದಿಂದ ಮಾತ್ರ ಉದ್ಯಮ ಬೆಳೆಸಲು ಸಾಧ್ಯ. ಹೊಟೆಲ್ ಉದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. ನೀವು ನಿಮಗಾಗಿ ಪ್ರಾಮಾಣಿಕರಾಗಬೇಕು. ಅಲ್ಲದೇ ರಾಜ್ಯದಲ್ಲಿ ನಿಮಗೆ ವ್ಯವಹಾರ ಸ್ನೇಹಿ ಸರ್ಕಾರ ಇದೆ. ಇದನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ಬೆಳೆಯಬೇಕು.ಆ ಮೂಲಕ ರಾಜ್ಯವೂ ಅಭಿವೃದ್ದಿಯಾಗಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿಗಳು ಕರೆನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಶಿವರಾಮ್ ಹೆಬ್ಬಾರ್, ಬೆಂಗಳೂರು ಹೊಟೆಲ್ ಸಂಘದ ಅಧ್ಯಕ್ಷ ಪಿಸಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿಸ್ದರು.

Post a Comment

0 Comments