ಜಯಮಾಂಗಲಿ ನದಿ ಪ್ರವಾಹದಿಂದ ಹಾನಿ ಒಳಗಾಗಿದ್ದ ಪ್ರದೇಶಕ್ಕೆ ಶಾಸಕ ಡಾ.ಜಿ ಪರಮೇಶ್ವರ್ ಭೇಟಿ

 ವಾರ್ತಾ ಜಾಲ ಸುದ್ದಿ ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಕೆಲವು ಹಳ್ಳಿಗಳಲ್ಲಿ ಜಯಮಾಂಗಲಿ ನದಿ ಪ್ರವಾಹದಿಂದ ಹಾನಿ ಒಳಗಾಗಿದ್ದ ಪ್ರದೇಶಕ್ಕೆ ಶಾಸಕರಾದ ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಜನ ನಮ್ಮನ್ನು ಆಶೀರ್ವದಿಸಿ ಆಯ್ಕೆ ಮಾಡಿ ಕಳಿಸಿದ ಮೇಲೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದ್ದು ಜನ ಪ್ರತಿನಿಧಿಗಳಾದ ನಮ್ಮ ಕರ್ತವ್ಯ ಎಂದು ನುಡಿದರು.

ಅವರು ಇತ್ತೀಚೆಗೆ ಜಯಮಂಗಲಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಮಧುಗಿರಿ ತಾ. ಚನ್ನಸಾಗರ ಗ್ರಾಮಕ್ಕೆ  ಭೇಟಿ ಕೊಟ್ಟು ಸಂತ್ರಸ್ತರಿಗೆ, ತಮ್ಮ ವೈಯಕ್ತಿಕ ಖರ್ಚಿನಿಂದ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ಜಯಮಂಗಲಿ ನದಿ ಉಕ್ಕಿ ಹರಿದ ಪರಿಣಾಮ ಗ್ರಾಮದ ಸುಮಾರು ತೊಂಭತ್ತು ಮನೆಗಳು ಸಂಪೂರ್ಣ ಜಲಾವೃತವಾಗಿದ್ದವು. ನಾವು ಅವರಿಗೆಲ್ಲ ನಿಟರಹಳ್ಳಿ ಕ್ರಾಸ್ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ತಾತ್ಕಾಲಿಕ ವ್ಯವಸ್ಥೆ ಮಾಡಿದೆವು. ಈಗ ಮನೆಯಲ್ಲಿದ್ದ ದವಸ ಧಾನ್ಯ ಹಾಳಾಗಿರುವುದರಿಂದ, ಚನ್ನಸಾಗರ, ನಂಜಾಪುರ, ಗಿಡ್ಡಯ್ಯನ ಪಾಳ್ಯ ಗ್ರಾಮದ ಜನತೆಗೆ

ಸಾಂಕೇತಿವಾಗಿ ಪಡಿತರ ನೀಡುತ್ತಿದ್ದೇನೆ ಎಂದರು. ಕೋಡಗದಾಲ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಪ್ರಸನ್ನಕುಮಾರ್, ಉಪಾಧ್ಯಕ್ಷೆ ಸಿದ್ಧಗಂಗಮ್ಮ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್‌, ಎಂ.ಜಿ. ಶ್ರೀ ನಿವಾಸ ಮೂರ್ತಿ, ಗ್ರಾ.ಪಂ ಸದಸ್ಯರುಗಳಾದ ಕೃಷ್ಣಾರೆಡ್ಡಿ, ವೆಂಕಟಾಚಲಪತಿ, ಮುಖಂಡ ರಾದ ಅಶ್ವತ್ತಪ್ಪ, ಸಿ.ಎಂ ನಾಗರಾಜು, ಚನ್ನಪ್ಪ, ಜಿ.ಜಗದೀಶ್, ಗೋವಿಂದಪ್ಪ, ಮರಿರಾಜ್‌, ನಾರಾಯಣ ರೆಡ್ಡಿ, ಚನ್ನಸಾಗರ ಪ್ರಸನ್ನ, ನಾಗಭೂಷಣ್, ಮಂಜುನಾಥ, ಪ್ರಸನ್ನಕುಮಾರ್‌, ಕೆ.ಟಿ. ನರಸಿಂಹ ಮೂರ್ತಿ, 

ನಾಗರಾಜು, ಶಿವರಾಮ್, ಸಂಜಯ್‌ ಮುಂತಾದವರಿದ್ದರು.

ನಮ್ಮ ಕೊರಟಗೆರೆ ಕ್ಷೇತ್ರದಲ್ಲಿ ವಿಶೇಷವಾಗಿ ಕಸಬಾ, ಕೋಳಾಲ, ಪುರವರ,

    1. ಹೊಳವನಹಳ್ಳಿ ಹೋಬಳಿಗಳಲ್ಲಿ ನದಿ ಪ್ರವಾಹದ ರೀತಿ ನುಗ್ಗಿ ಅಪಾರ ಬೆಳೆ, ಮೇವು ನಾಶವಾಗಿದೆ. ನಾನು ಎರಡೂ ತಾಲ್ಲೂಕಿನ ತಹಸೀಲ್ದಾರರಿಗೆ ಎಲ್ಲೆಲ್ಲಿ ಬೆಳೆ, ಜನ, ಜಾನುವಾರು ನಷ್ಟವಾಗಿದೆಯೊ ಅವರಿಗೆ ತಕ್ಷಣ ಪರಿಹಾರದ ವ್ಯವಸ್ಥೆ ಮಾಡಲು ಹೇಳಿದ್ದೇನೆ. ಕೋರ ಹೋಬಳಿಯ ಒಬ್ಬರು ಮತ್ತು ಕುರುಡುಗಾನ ಹಳ್ಳಿಯ ವೃದ್ಧೆಯೊಬ್ಬರು ಪ್ರವಾಹದಲ್ಲಿ ಮೃತರಾಗಿದ್ದರು. ಅವರ ಮನೆಯವರಿಗೆ ನಾನು ವೈಯಕ್ತಿಕವಾಗಿ ಐದು ಲಕ್ಷರೂ.ಗಳ ಸಹಾಯ ಮಾಡಿದ್ದೇನೆ. ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಇನ್ನೂ ಹೆಚ್ಚಿನ ಮಳೆ ಬೀಳುವ ಸಂಭವ ಇದ್ದು, ಎಲ್ಲರೂ ಎಚ್ಚರಿಕೆಯಿಂದ ಎಂದು ಪರಮೇಶ್ವರ್ ಸೂಚಿಸಿದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments