ಮೋರಿಯಿಂದ ತೆಗೆದ ಹೂಳನ್ನು ಸಾಗಿಸುವುದಕ್ಕೂ, ಪಾಲಿಕೆ ಆಯುಕ್ತರೇ ನಿರ್ದೇಶನ ನೀಡಬೇಕೆ ?

ಬೆಂಗಳೂರು : ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಂತ್ರಿಮಾಲ್ ಮುಂಭಾಗದಲ್ಲಿರುವ ಶೇಷಾದ್ರಿಪುರಂ ಭಾಷ್ಯಂ ಪಾರ್ಕ್‌ ಹೊಂದಿಕೊಂಡಿರುವ ಪಕ್ಕದ ರಸ್ತೆಯಲ್ಲಿ ಮಳೆಗಾಲಕ್ಕೆಂದು ಮುಂಜಾಗ್ರತೆ ವಹಿಸಿ  ಬಿಬಿಎಂಪಿ ಯವರು ಚರಂಡಿಯಲ್ಲಿ ಹೂಳು ತೆಗೆದು ವಾರ ಕಳೆದರೂ, ಅಲ್ಲಲ್ಲಿ ಗುಪ್ಪೆ ಹಾಕಿರುವ ಹೂಳಿನ ರಾಶಿಯನ್ನು ಅಲ್ಲಿಂದ ಸಾಗಿಸದ ಕಾರಣದಿಂದಾಗಿ, ಇತ್ತೀಚೆಗೆ ಆಗಿಂದಾಗ್ಗೆ  ಸುರಿಯುತ್ತಿರುವ ಜೋರು ಮಳೆಯಿಂದಾಗಿ ಮತ್ತೆ ಹೂಳು ಚರಂಡಿಗೆ ಸೇರುವುದು ನಿಶ್ಚಿತವೆಂಬುದರ ಜೊತೆಗೆ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೀಸಲಾದ ಜಾಗವಾಗಿರುವುದರಿಂದ ಇಲ್ಲಿ ಅವುಗಳ ನಿಲುಗಡೆಗೂ ಅಡ್ಡಿಯಾಗಿದೆ. ಇತ್ತೀಚೆಗೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೂ ಆಯುಕ್ತರನ್ನೇ ಪಾಲಿಕೆ ಹೆಚ್ಚು ಅವಲಂಬಿಸಿರುವಂತೆ, ಇದಕ್ಕೂ ಆಯುಕ್ತರೇ ಭೇಟಿ ನೀಡಿ ಮಾರ್ಗದರ್ಶನ ನೀಡಿ ಪರಿಹರಿಸುವ ಅಗತ್ಯವಿದೆಯೇ ??? ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ.Post a Comment

0 Comments