ಭಕ್ತಮಹಾಶಯರೇ,
ಪ್ರಕಾಶನಗರದ ಶ್ರೀ ಗುರುರಾಜರ ಸನ್ನಿಧಿಯ ನೂತನ ಕಟ್ಟಡ ನಿರ್ಮಾಣ ಕಾರ್ಯವು ದೈನಂದಿನ ಪೂಜಾ ಕಾರ್ಯಕ್ರಮ ನಡೆಸುವ ಹಂತಕ್ಕೆ ಪೂರ್ಣಗೊಂಡಿದ್ದು, ನಾವೆಲ್ಲರೂ ಎದುರು ನೋಡುತ್ತಿದ್ದ ಆ ಮಹಾಸುದಿನವು ಬಂದೊದಗಿದೆ.
ಶ್ರೀಹರಿವಾಯು ಗುರುಗಳ ಪರಮಾನುಗ್ರಹದಿಂದ ಮತ್ತು ತಮ್ಮೆಲ್ಲರ ಸಹಕಾರದಿಂದ ಕ್ಷಿಪ್ರಪ್ರಸಾದ ಗಣಪತಿ, ಮುಖ್ಯಪ್ರಾಣ ದೇವರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳವರ ಮೂಲ ಮೃತ್ತಿಕಾ ಬೃಂದಾವನದ ಪುನಃ ಪ್ರತಿಷ್ಠಾಪನೆ ಹಾಗೂ ನೂತನವಾಗಿ ಶೇಷ ದೇವರ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ : 22.06.2022, ಬುಧವಾರ ಮತ್ತು 23.06.2022 ಗುರುವಾರ.
ಈ ಮಹತ್ಕಾರ್ಯದಲ್ಲಿ ತಾವುಗಳು ಕುಟುಂಬ ಸಮೇತರಾಗಿ ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಪ್ರಸಾದ ಫಲಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ.
ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ (ರಿ)
ಮೊಬೈಲ್: +91 99006 36060
0 Comments