*38-year old woman diagnosed as kidney Problem gets a new lease of life at NU Hospitals, Bengaluru*

For the last few months, a 38-year old married woman was detected to have a poorly functioning left kidney when she went for a routine health check up. She was evaluated by doctors elsewhere and was advised removal of left kidney considering it to be a congenital problem (by birth). Another Urologist advised her to forget about the kidney as it is poorly functioning. Patient and her husband were in deep distress hearing this 


The couple finally visited NU Hospitals, Padmanabhanagar - Bengaluru for an expert opinion. "Upon further enquiry and investigation, she was completely normal without any symptoms but her reports suggested she had only a seven percent function remaining in the left kidney. To our surprise, she had an ultrasound done six years back which reported a completely normal left kidney. This information was very crucial which made us investigate more and the problem was not by birth as mentioned by the other doctor. This is quite important as patients need to preserve older reports which can help doctors in analysing the current situation. On further imaging, it was found that the left ureter (pipe connecting kidney to bladder) was actually compressed by the large bulky uterus and this led to poor functioning of the left side kidney, because of the obstruction”, said Dr Vinod Kumar - Consultant Urologist at NU Hospitals.

 Gynaecology consultation  was taken and the patient was further found to have uterine adenomyosis (non-cancerous growth from uterus) which was causing her excessive bleeding and pain during menstruation.  "She was planned for uterus removal by the gynecologist. After studying the kidney images and as the patient was young, it was decided to save the kidney by repairing the left ureter instead of removing it. Both the surgeries were planned at the same time by two teams consisting of Urologists and Gynecologists. Recently, the patient underwent successful removal of her uterus along with repair of the left ureter that was blocked. Guess what !! Both surgeries were done laparoscopically (keyhole surgery) without making any large cut in the abdomen.  The large uterus with its growth was removed through vagina. Patient was stable, recovered well and was discharged.

After one month of follow-up she is very happy and at the same time thankful as her dual problems were taken care of simultaneously", added Dr Vinod

 Doctors say that excellent team work between Urologist and Gynaecologist of NU Hospitals did the trick for the patient as a single surgery solved two issues for the patient.

For patients, it is necessary to provide a detailed history of the case and also to preserve the old reports. Many don't go for routine checkups. But, this case demonstrated how yearly health check-ups are essential and may pull a rabit out of the hat

Doctors always suggest that it is better to take a second opinion in complex cases and go for an expert in their respective fields.

 

38 ವರ್ಷದ ಮಹಿಳೆಯ ಮೂತ್ರಪಿಂಡ ಸಮಸ್ಯೆಗೆ ಪರಿಹಾರ ಒದಗಿಸಿದ ಬೆಂಗಳೂರಿನ NUಆಸ್ಪತ್ರೆ ತಜ್ಞ ವೈದ್ಯರು:

 ಕಳೆದ ಕೆಲವು ತಿಂಗಳುಗಳಿಂದ, ತನ್ನ ಮೂತ್ರಪಿಂಡದ ಸಮಸ್ಯೆಯ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದ 38 ವರ್ಷದ ವಿವಾಹಿತ ಮಹಿಳೆಯ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಮುಗಿಸಿದ್ದಾರೆ ಬೆಂಗಳೂರಿನ ಪ್ರತಿಷ್ಠಿತ NUಆಸ್ಪತ್ರೆಯ ವೈದ್ಯರು.  ಆ ಮಹಿಳೆ ಈ ಹಿಂದೆ ಹಲವು ಪರಿಣಿತರಲ್ಲಿ ಈ ಸಮಸ್ಯೆಯನ್ನು ತೋಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಕೆಲವು ತಿಂಗಳ ಹಿಂದೆ ಸಾಮಾನ್ಯ ಆರೋಗ್ಯ ತಪಾಸಣೆಗೆ ಹೋದ ಸಂದರ್ಭದಲ್ಲಿ ಮಹಿಳೆಗೆ ತನ್ನ ಎಡ ಮೂತ್ರಪಿಂಡ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ಆದರೆ ಈ ಸಮಸ್ಯೆಯನ್ನು ಪರೀಕ್ಷಿಸಿದ್ದ ಬೇರೆ ವೈದ್ಯರು ಇದು ಜನ್ಮಜಾತ ಸಮಸ್ಯೆ ಎಂದು ಪರಿಗಣಿಸಿ ಎಡ ಮೂತ್ರಪಿಂಡವನ್ನು ತೆಗೆದುಹಾಕಲು ಸಲಹೆ ನೀಡಿದ್ದರು. ಇನ್ನೊಬ್ಬ ಮೂತ್ರಶಾಸ್ತ್ರಜ್ಞರು ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅದನ್ನು ಮರೆತುಬಿಡಲು ಸಲಹೆ ನೀಡಿದ್ದರು. ಇದನ್ನು ಕೇಳಿದ ರೋಗಿ ಮಹಿಳೆ ಹಾಗೂ ಆಕೆಯ ಪತಿ ತೀವ್ರ ಸಂಕಟಕ್ಕೆ ಒಳಗಾಗಿದ್ದರು. ದಂಪತಿಗಳು ಅಂತಿಮವಾಗಿ ಬೆಂಗಳೂರಿನ ಪದ್ಮನಾಭನಗರದ NUಆಸ್ಪತ್ರೆಗೆ ಭೇಟಿ ನೀಡಿದ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆದುಕೊಂಡು ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ.

NU ಆಸ್ಪತ್ರೆಯ ತಜ್ಞ ವೈದ್ಯರು ಎಲ್ಲ ರೀತಿಯ ಪರೀಕ್ಷೆ ನಡೆಸಿ, ಎಡ ಮೂತ್ರಪಿಂಡ ಕೇವಲ 7% ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿಯಲ್ಲಿ ಕಂಡುಕೊಂಡರು. ಆರು ವರ್ಷಗಳ ಹಿಂದೆ ಮಹಿಳೆ ಅಲ್ಟ್ರಾಸೌಂಡ್ ಮಾಡಿಸಿದ್ದಾಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಈ ಅಂಶವನ್ನು ಮನಗಂಡು ಹೆಚ್ಚಿನ ವೈದ್ಯಕೀಯ ತನಿಖೆ ನಡೆಸಿದ NU ಆಸ್ಪತ್ರೆಯ ವೈದ್ಯರು, ಬೇರೆ ವೈದ್ಯರು ಸೂಚಿಸಿದಂತೆ ಈ ಸಮಸ್ಯೆ ಹುಟ್ಟಿನಿಂದ ಬಂದಿದ್ದಲ್ಲ ಅನ್ನುವ ತೀರ್ಮಾನಕ್ಕೆ ಬಂದರು. NUಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ. ವಿನೋದ್ ಕುಮಾರ್ ಹಾಗೂ ತಂಡ ಈ ನಿಟ್ಟಿನಲ್ಲಿ ಕೂಲಂಕೂಷವಾಗಿ ತನಿಖೆ ನಡೆಸಿ ನಿರ್ಣಯಕ್ಕೆ ಬಂದರು. ಎಡ ಮೂತ್ರನಾಳ (ಮೂತ್ರಪಿಂಡವನ್ನು ಮೂತ್ರಕೋಶಕ್ಕೆ ಸಂಪರ್ಕಿಸುವ ಪೈಪ್) ವಾಸ್ತವವಾಗಿ ದೊಡ್ಡ ಗರ್ಭಾಶಯದಿಂದ ಸಂಕುಚಿತಗೊಂಡಿದ್ದು, ಇದು ಎಡಭಾಗದ ಮೂತ್ರಪಿಂಡದ ದುರ್ಬಲ ಕಾರ್ಯನಿರ್ವಹಣೆಗೆ ಕಾರಣವಾಗಿದೆ ಎಂದು ಪತ್ತೆ ಹಚ್ಚಿದರು.

ಬಳಿಕ ಸ್ತ್ರೀರೋಗ ಶಾಸ್ತ್ರದ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ರೋಗಿಗೆ ಗರ್ಭಾಶಯದ ಅಡೆನೊಮೈಯೋಸಿಸ್ (ಗರ್ಭಾಶಯದ ಕ್ಯಾನ್ಸರ್ ಅಲ್ಲದ ಬೆಳವಣಿಗೆ) ಇರುವುದು ಗಮನಿಸಿದರು. ಹೀಗಾದಾಗ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಮತ್ತು ನೋವನ್ನು ಉಂಟುಮಾಡುತ್ತದೆ. ಸ್ತ್ರೀರೋಗತಜ್ಞರಿಂದಲೂ ಮಹಿಳೆಯ ಗರ್ಭಾಶಯ ತೆಗೆಯುವ ಸಲಹೆ ನೀಡಲಾಗಿತ್ತು. ಆದರೆ ಮೂತ್ರಪಿಂಡದ ಚಿತ್ರಗಳನ್ನು ಅಧ್ಯಯನ ಮಾಡಿದ ನಂತರ ಮತ್ತು ರೋಗಿಯು ವಯಸ್ಸು ಕಡಿಮೆ ಇರುವುದರಿಂದ ಗರ್ಭಾಶಯ ತೆಗೆದುಹಾಕುವ ಬದಲು ಎಡ ಮೂತ್ರನಾಳವನ್ನು ದುರಸ್ತಿ ಮಾಡುವ ಮೂಲಕ ಮೂತ್ರಪಿಂಡವನ್ನು ಉಳಿಸಲು ನಿರ್ಧರಿಸಲಾಯಿತು. ಎರಡೂ ಶಸ್ತ್ರಚಿಕಿತ್ಸೆಗಳನ್ನು ಒಂದೇ ಸಮಯದಲ್ಲಿ ಯೋಜಿಸಲಾಯಿತು. ಮೂತ್ರಶಾಸ್ತ್ರಜ್ಞರು ಮತ್ತು ಸ್ತ್ರೀರೋಗತಜ್ಞರನ್ನು ಒಳಗೊಂಡ ಎರಡು ತಂಡಗಳು ರೋಗಿಯ ಎಡ ಮೂತ್ರನಾಳವನ್ನು ಸರಿಪಡಿಸುವುದರ ಜೊತೆಗೆ ಗರ್ಭಾಶಯವನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ದೊಡ್ಡ ಗರ್ಭಾಶಯವನ್ನು ಯೋನಿಯ ಮೂಲಕ ತೆಗೆದುಹಾಕಲಾಯಿತು, ಕ್ರಮೇಣ ರೋಗಿ ಮಹಿಳೆ ಚೇತರಿಸಿಕೊಂಡರು. ಅತ್ಯಾಧುನಿಕ ಕೀ ಹೋಲ್ ಸರ್ಜರಿ ಮುಖಾಂತರ ಶಸ್ತ್ರಚಿಕಿತ್ಸೆ ನಡೆಸಿದ ಕಾರಣ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಅಗತ್ಯ ಇಲ್ಲ ಎಂದು NU ಆಸ್ಪತ್ರೆಯ ವೈದ್ಯರು ಅಭಿಪ್ರಾಯಪಟ್ಟರು.

ಶಸ್ತ್ರಚಿಕಿತ್ಸೆ ನಡೆದು ಒಂದು ತಿಂಗಳ ನಿರಂತರ ಆರೈಕೆಯ ನಂತರ ಮಹಿಳೆ ಹಿಂದಿಗಿಂತಲೂ ಆರೋಗ್ಯವಾಗಿದ್ದಾರೆ.  ಒಂದೇ ಸಮಯದಲ್ಲಿ ರೋಗಿಯ ಎರಡು ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಿದ್ದರಿಂದ ಕೃತಜ್ಞಳಾಗಿದ್ದಾರೆ. NU ಆಸ್ಪತ್ರೆಗಳ ಮೂತ್ರಶಾಸ್ತ್ರಜ್ಞ ಮತ್ತು ಸ್ತ್ರೀರೋಗತಜ್ಞರ ನಡುವಿನ ಅತ್ಯುತ್ತಮ ಹೊಂದಾಣಿಕೆಯ ಕಾರ್ಯಾಚರಣೆ ರೋಗಿಯ ಸಮಸ್ಯೆಗೆ ಸುಲಭವಾಗಿ ಪರಿಹಾರವಾಗಲು ಸಾಧ್ಯವಾಯಿತು ಎಂದು ಡಾ ವಿನೋದ್ ಹೇಳಿದರು.



Post a Comment

0 Comments