ಐಐಹೆಚ್‌ಎಂಆರ್ ಬೆಂಗಳೂರು 10ನೇ ಘಟಿಕೋತ್ಸವ

ಕೋವಿಡ್ ಸಂಕಷ್ಟಃ ಖಾಸಗಿ ಆಸ್ಪತ್ರೆಗಳು ಗುಣಮಟ್ಟ ಸುಧಾರಣೆಗೆ ಮುಂದಾಗಬೇಕು- ಕೇಂದ್ರ ಆರೋಗ್ಯ ವ್ಯವಸ್ಥೆಗಳ ಸಲಹೆಗಾರ ಡಾ.ಜೆ. ಏನ್. ಶ್ರೀ ವಾಸ್ತವ್.ಬೆಂಗಳೂರು: ಬೆಂಗಳೂರು ಎಲೆಕ್ಟಾನಿಕ್ ಸಿಟಿ, ಇನ್ಸಿಟ್ಯೂಟ್   ಆಫ್ ಹೆಲ್ತ್ ಮ್ಯಾನೇಜ್ಮೆಂಟ್ ರಿಸರ್ಚ್  ಬೆಂಗಳೂರಿನ  10ನೇ ಎ.ಐ.ಸಿ.ಟಿ.ಇ- ಪಿ.ಜಿ.ಡಿ.ಎಂ 2019-21 ನೇ ಸಾಲಿನ ಘಟಿಕೋತ್ಸವ ಸಮಾರಂಭದಲ್ಲಿ 55 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದರು.  

ಕೇಂದ್ರ ಸರ್ಕಾರ ರಾಷ್ಟಿçಯ   ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ   ಗುಣಮಟ್ಟ ಸುಧಾರಣೆ ಸಲಹೆಗಾರ  ಡಾ. ಜೆ.ಎನ್ ಶ್ರೀವಾಸ್ತವ ಮಾತನಾಡಿ, ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ  ಖಾಸಗಿ ಆಸ್ಪತ್ರೆಗಳು ಗುಣಮಟ್ಟ ಸುದಾರಣೆ ಜೊತೆಗೆ ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಆಸ್ಪತ್ರೆ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವವರು ಕಾರ್ಯನಿರ್ವಹಿಸಬೇಕಿದೆ, ವಿಶೇಷವಾಗಿ ಆಸ್ಪತ್ರೆಗಳ ನಿರ್ವಹಣೆಗೆ ನಾಯಕತ್ವದ ಗುಣ ಅಗತ್ಯವಾಗಿದ್ದು. ಸೂಕ್ತ ತೀರ್ಮಾನ ಕೈಗೊಳ್ಳುವ ಸಾಮರ್ಥ ವಿರಬೇಕು   ಎಂದು ಹೇಳಿದರು.

10ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಷಣಮಾಡಿದ ಗ್ಲೋಬಲ್ ಹಾಸ್ಪಿಟಲ್ ಮುಂಬೈ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಡಾ ವಿವೇಕ್ ತಲೌಲಿಕರ್,  ಕೋವಿಡ್ ಸಂಕಷ್ಟ  ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಆರೋಗ್ಯ ರಕ್ಷಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದ್ದು.  ಜನರಲ್ಲಿ ತಮ್ಮ ದುಡಿಮೆಯ ಆದಾಯದಲ್ಲಿ ಸ್ವಲ್ಪ ಉಳಿತಾಯಮಾಡಿ ಆರೋಗ್ಯ ವಿಮೆ ಹೊಂದುವಲ್ಲಿ ಜನರಿಗೆ ಅರಿವು ಮೂಡಿಸಬೇಕು, ಕನಿಷ್ಠ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಆರೋಗ್ಯ ವಿಮೆ ಹೊಂದಿರುವುದು ಅಗತ್ಯ ಎಂದು  ಹೇಳಿದರು.

ದೇಶದ  ಎಲ್ಲಾ ಭಾಗದ ಆಸ್ಪತ್ರೆಗಳು ಜನರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣ್ಣಮಟ್ಟದ ಚಿಕಿತ್ಸೆ ನೀಡುವಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.

ಐಐಹೆಚ್‌ಎಂಆರ್ ಬೆಂಗಳೂರು ಮುಖ್ಯಸ್ಥೆ ಡಾ. ಉಷಾ ಮಂಜುನಾಥ್ ಮಾತನಾಡಿ, ಆರೋಗ್ಯ ನಿರ್ವಹಣಾ ಕ್ಷೇತ್ರದಲ್ಲಿ ದಕ್ಷಿಣ ಭಾರತದ ಪ್ರಮುಖ ಸಂಸ್ಥೆಯಾಗಿದೆ.  ಹೆಲ್ತ್ ಮ್ಯಾನೇಜ್ಮೆಂಟ್, ಹಾಸ್ಪಿಟಲ್ ಮ್ಯಾನೇಜ್ಮೆಂಟ್, ಫಾರ್ಮಸಿಟಿಕಲ್ ಮ್ಯಾನೇಜ್ಮೆಂಟ್ ಮತ್ತು ಹೆಲ್ತ್ ಇನ್ಫಾರ್ಮಶನ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಎರಡು ವರ್ಷಗಳ ಪೂರ್ಣಾವಧಿಯ ಸ್ನಾತಕೋತ್ತರ ಕೋರ್ಸ್ ಹೊಂದಿದೆ.  ಈ  ಸಮಾರಂಭದಲ್ಲಿ 2019-21 ನೇ ಸಾಲಿನ 55 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಂತಸ ತಂದಿದೆ ಎಂದರು.

ನಮ್ಮ ವಿದ್ಯಾರ್ಥಿಗಳು ಜೀವನದಿಂದ ವೃತ್ತಿಪರ ಜೀವನಕ್ಕೆ ಪರಿವರ್ತನೆಗೊಳ್ಳುವ ರಾಯಭಾರಿಗಳಾಗಿದ್ದಾರೆ.  ಈಗಾಗಲೇ ಆರೋಗ್ಯ ಉದ್ಯಮಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ  ಉದ್ಯೋಗ ಪಡೆದಿದ್ದಕ್ಕಾಗಿ ನಮ್ಮ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಇದೆ ಎಂದರು.

ಐಐಎಚ್‌ಎAಆರ್ ಆಹ್ವಾನಿತ ಪ್ರೊ. ಸಡಗೋಪನ್ ಮಾತನಾಡಿ   ನಮ್ಮ ಸಂಸ್ಥೆ ನೀಡುವ ಗುಣಮಟ್ಟದ ಶಿಕ್ಷಣವು ಉದ್ಯೋಗ ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತದೆ ನಮ್ಮ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಐಐಹೆಚ್‌ಎಂಆರ್ ಬೆಂಗಳೂರಿಗೆ ಟಾಪ್ 50 ಬಿ-ಸ್ಕೂಲ್‌ನಲ್ಲಿ 19ನೇ ಶ್ರೇಣಿ ನೀಡಲಾಗಿದೆ. ಶೇಕಡ 100 ಉದ್ಯೋಗವನ್ನು ಪಡೆದುಕೊಂಡಿದೆ. ಐಐಹೆಚ್‌ಎಂಆರ್ ಬೆಂಗಳೂರು ಆಸ್ಪತ್ರೆಗಳಿಗೆ ಎನ್‌ಎಬಿಇಟಿ ನಿಂದ ಸಲಹೆಗಾರ ಸಂಸ್ಥೆಯಾಗಿ ಮಾನ್ಯತೆ ಪಡೆದ ಭಾರತದ ಮೊದಲ ಶಿಕ್ಷಣ ಸಂಸ್ಥೆಯಾಗಿದೆ ಎಂದು ತಿಳಿಸಿದರು.


ಐಐಹೆಚ್‌ಎಂಆರ್  ಟ್ರಸ್ಟಿ ಕಾರ್ಯದರ್ಶಿ ಡಾ. ಎಸ್.ಡಿ. ಗುಪ್ತಾ  ಮಾತನಾಡಿ, ಆಸ್ಪತ್ರೆಗಳ ಮ್ಯಾನೆಜ್‌ಮೆಂಟ್ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ನಡವಳಿಕೆ, ಜ್ಞಾನವನ್ನು ರೂಡಿಸಿಕೊಂಡರೆ ತಾವು ಕೈಗೊಳ್ಳುವ ಆಸ್ಪತ್ರೆಯ ನಿರ್ವಹಣಾ ಕಾರ್ಯದಲ್ಲಿ ಯಶಸ್ಸು ಗಳಿಸಬಹುದಾಗಿದೆ. ಉತ್ತಮ ಸಂಪರ್ಕ, ಸಂವಹನ ಕೂಡ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಡಾ. ಕೀರ್ತಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿದರು. ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದರು, ತುಮಕಿ ಹರಿಣಿ ಹಾಗು  ಜ್ಯೋತಿ. ಎಂ. ಬೋರ್ಕರ್,  ವಿ.ಪಿ. ಅಗರ್ ವಾಲ್ ಹೆಸರಿನ ಚಿನ್ನದ ಪದಕ, ಆಕಾಶ್ ಶರ್ಮ ಎಂ.ಎಲ್. ಮೆಹ್ತಾ ಹೆಸರಿನ ಚಿನ್ನದ ಪದಕ ಪಡೆದರು. ಉತ್ತಮ ಎಂಟರ್ ಪ್ರೆöÊಸಿಂಗ್ ಪದವಿ ಪ್ರಮಾಣ ಪತ್ರವನ್ಬು ಡಾ.ಪ್ರೀತಿ ಗೋಪಿನಾಥನ್ ಅಯ್ಯರ್ ಪಡೆದರು, ಉತ್ತಮ ಫ್ಯಾಕಲ್ಟಿ ಸ್ಟೂಡೆಂಟ್ ಪ್ರಮಾಣ ಪತ್ರವನ್ನು ಜ್ಯೋತಿ ಬೋರ್ಕರ್, ಡಾ. ಗೌತಮಿ ಪಡೆದರು.

Post a Comment

0 Comments