ಕೊರೊನಾ 3ನೆ ಅಲೆ: ಭಯಂಕರವೋ, ಭೀಕರವೋ ...!


ಯುರೇನಸ್ ಗ್ರಹವೇ ಕೊರೊನಾ ಜನಕ ಗ್ರಹವೆಂದು ವಿಶ್ಲೇಷಿಸಲಾಗಿದೆ. ಅದೇ ರೀತಿಯಲ್ಲಿ ಉರೇನಸ್ ಗ್ರಹವು ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ  ಉಂಟಾಗಿದ್ದ ದುಷ್ಟಪರಿಣಾಮಗಳನ್ನು ಹಿಂದಿನ  ಸಂಚಿಕೆಯಲ್ಲಿ ಚರ್ಚಿಸಲಾಗಿದೆ.

ಬುಧಗ್ರಹವು, ರೋಗಕಾರಕನಾಗಿ ಮೇಷರಾಶಿಯಿಂದ ವೃಷಭ ರಾಶಿಗೆ ಪ್ರವೇಶಿಸುವ ವೇಳೆಗೆ ಕೊರೋನ ಸಮಸ್ಯೆ ಶಮನಗೊಳಿಸುವುದೆಂದು, ಮುಖ್ಯವಾಗಿ ಜೂನ್ 11ನೇ ತಾರೀಖು 2021 ರಿಂದ ಕೊರೊನಾ ಇಳಿಮುಖವಾಗುವದೆಂದು, ಸಾವಿನ ಪ್ರಮಾಣದಲ್ಲಿಯು ಇಳಿಮುಖ ಕಾಣುವುದೆಂದು ನಿಖರವಾಗಿ ಭವಿಷ್ಯವನ್ನು ನೀಡಲಾಗಿತ್ತು. 

ಅದೇ ರೀತಿಯಲ್ಲಿ ಕೊರೊನಾ ಮತ್ತು ಸಾವಿನ ಪ್ರಮಾಣ ಜೂನ್ 11ರಿಂದ ಇಂದಿನವರೆಗೆ, ಇಳಿಮುಖವಾಗಿರುವುದು ಸತ್ಯ ಸಂಗತಿಯಾಗಿದೆ. ಆದುದರಿಂದ 11-06-2021 ದಿನದಂದು  ಸಂಜೆ 5.30 ಕುಂಡಲಿ ಆಧರಿಸಿ ವಿಮರ್ಶೆ ಮಾಡಿದರೆ, 3ನೇ ಅಲೆಯ ಮಾಹಿತಿ ದೊರೆಯುವುದು ಅಷ್ಟೇ ಸತ್ಯವಾಗುತ್ತದೆ.

ಬುಧಗ್ರಹವು ಉರೇನಸೆ ಸ್ಥಿತ ಲಗ್ನಕ್ಕೆ 6ನೆ ರಾಶ್ಯಾಧಿಪತಿಯಾಗಿ ರೋಗಕಾರಕನಾಗಿರುತ್ತಾನೆ. ಮತ್ತು ರೋಗವನ್ನು ಸುಚಿಸುವನು. ವೃಷಭ ರಾಶಿಯು ಜ್ಯೋತಿಷ ಶಾಸ್ತçದ  ಆದಾರದ ಮೇಲೆ, ಕಾಲಪುರುಷನ ಅಂಗಭಾಗವಾದ ಮುಖವನ್ನು, ಮುಖದಲ್ಲಿರುವ ಕಣ್ಣು, ಕಿವಿ, ಮೂಗು, ಬಾಯಿ, ನಾಲಿಗೆ, ಹಲ್ಲು, ತುಟಿ ಮತ್ತು ಮುಖದಲ್ಲಿನ ಚರ್ಮವನ್ನು ಸಹಿತ ಸೂಚಿಸುವುದು.

ಗ್ರಹಗಳು ಸಹಿತ ನಿಷಿದ್ಧವಾದ ರೋಗವನ್ನು ಶಾರೀರದಲ್ಲಿನ ಅಂಗ ಭಾಗಗಳನ್ನು ಸೂಚಿಸುವುದೆಂದು ಜ್ಯೊತಿಷ ದಲ್ಲಿ ತಿಳಿಸಲಾಗಿದೆ. ಹಾಗಾಗಿ ಬುಧ ಗ್ರಹವು, ವಿಶೇಷವಾಗಿ ಮೂಗು, ನರಮಂಡಲ, ಬಾಯಿ, ನರಮಂಡಲ ಮತ್ತು ಪಕ್ಕೆಲುಬುಗಳನ್ನು ಸೂಚಿಸುತ್ತದೆ.ಬುಧಗ್ರಹವು ಆ ದಿನ ಕುಜಗ್ರಹದ ಮೃಗಶಿರಾ ನಕ್ಷತ್ರದಲ್ಲಿ ಸ್ಥಿತನಾಗಿದ್ದಾನೆ. 

ಕುಜ ಗ್ರಹವು, ರಕ್ತ, ಗರ್ಭಕೋಶ, ಜನನೇಂದ್ರಿಯಗಳು ಹಾಗು ಗುದದ್ವಾರವನ್ನು ಪ್ರತಿನಿಧಿಸುಸ್ತಾನೆ. ಬುಧಗ್ರಹವು ರಾಹುಜೊತೆಗೂಡಿ ವೃಷಭದಲ್ಲಿ ಸ್ಥಿತನಾಗಿರುವನು. ರಾಹುವಿರುವ ನಕ್ಷತ್ರ ಚಂದ್ರನ ನಕ್ಷತ್ರವಾದ ರೋಹಿಣಿಯಲ್ಲಿ.  ರವಿಗ್ರಹವು ಸಹಿತ ವೃಷಭದಲ್ಲಿ ಬುಧ ಮತ್ತು ರಾಹುವಿನೊಡನೆ. ಸ್ಥಿತನಾಗಿರುವನು. ರವಿಗ್ರಹವು ಕುಜನ ನಕ್ಷತ್ರವಾದ ಮೃಗಶಿರದಲ್ಲಿರುವನು.

ರಾಹುಗ್ರಹವು ವ್ಯಕ್ತಿಯ ಶರೀರದಲ್ಲಿನ ಚರ್ಮ ಹಾಗೂ ತುಟಿಬಾಗವನ್ನು ಸೂಚಿಸುವುದು. ಉರೇನಸ್ ಗ್ರಹವು, ಮೇಷದಲ್ಲಿ ಶುಕ್ರನಕ್ಷತ್ರ ಭರಣಿಯಲ್ಲಿ ಸ್ಥಿತನಾಗಿ, ಶುಕ್ರನ ಕಕ್ಷೆಯಲ್ಲಿಯೇ ಸಂಚರಿಸುತ್ತಿರುವನು. ಯುರೇನಸ್ ಗ್ರಹವು ಸ್ಥಿತರಾಶಿ ಮೇಷವಾಗಿ ಅದರ ಅಧಿಪತಿ ಕುಜ ಗ್ರಹವಾಗಿರುತ್ತಾನೆ. ಕುಜ ಸ್ಥಿತರಾಶಿಯು ಕರ್ಕಾಟಕವಾಗಿ, ಉರೇನಸ್‌ಗೆ 4ನೆ ರಾಶಿಯಾಗಿರುತ್ತದೆ.

ಯುರೇನಸ್ ಸ್ಥಿತ ರಾಶಿಯು ವ್ಯಕ್ತಿಯಾಗುತ್ತಾನೆ. 4ನೆ ಮನೆಯು ಮಾತೃ ಕ್ಷೇತ್ರವಾಗುತ್ತದೆ. ಕರ್ಕಾಟಕದಲ್ಲಿ ಸ್ಥಿತನಾದ ಕುಜನು ಶನಿಯ ನಕ್ಷತ್ರವಾದ ಪುಷ್ಯದಲ್ಲಿರುವನು. ಶನಿಯು ಸಹಿತ ವ್ಯಕ್ತಿಯ ಶರೀರದಲ್ಲಿನ ಹಲ್ಲು, ದೇಹದ ಸಂಧಿ ಪ್ರದೇಶಗಳು (ರಿoiಟಿಣs) ಮತ್ತು ಕಾಲುಗಳನ್ನು ತೋರಿಸುವುದು. ಕುಂಡಲಿಯಲ್ಲಿ ಸಹಿತ ಶನಿಯು ಕುಜನನ್ನು, ಕುಜನು ಶನಿಯನು ವೀಕ್ಷಿಸುತ್ತಿರುವನು.  ಅದೇರೀತಿಯಲ್ಲಿ ಬುಧ ಮತ್ತು ಶುಕ್ರ ಗ್ರಹಗಳು ಪರಿವರ್ತೆನೆಯಲ್ಲಿರುವರು. ಶುಕ್ರಗ್ರಹವು ರಾಹುವಿನ ನಕ್ಷತ್ರವಾದ ಆರಿದ್ರಾದಲ್ಲಿ ಶಿತನಾಗಿದ್ದು, ಶುಕ್ರಗ್ರಹವು ಕಣ್ಣು ಮತ್ತು ಮೂಲವ್ಯಾಧಿಯನ್ನು ಪ್ರತಿನಿದಿಸುವುದು. ಉರೇನಸ್ ಗ್ರಹವು ಶುಕ್ರನಕ್ಷತ್ರ ಭರಣಿಯಲ್ಲಿದ್ದು, ಶುಕ್ರನ ಕಕ್ಷೆಯಲ್ಲಿದ್ದು, 7ನೆ ದೃಷ್ಟಿಯಿಂದ ಶುಕ್ರನ ರಾಶಿಯಾದ ತುಲಾರಾಶಿಯನ್ನು ವೀಕ್ಷಿಸುತ್ತಿರುವನು. ಅದೇ ತುಲಾರಾಶಿಯನ್ನು, ಶನಿ, ಗುರು(ವ)ಮತ್ತು ಕುಜಗ್ರಹಗಳು ಸಹಿತ ವೀಕ್ಷಿಸಿತ್ತಿರುವರು. ಕುಜ ಸ್ಥಿತರಾಶಿಯು  ಕರ್ಕಾಟಕರಾಶಿಯಾಗಿರುತ್ತದೆ. ಕರ್ಕಾಟಕ ರಾಶಿಯು, ಎದೆ, ಶ್ವಾಸಕೋಶ ಮತ್ತು ಹೃದಯ ಭಾಗವನ್ನು ಪ್ರತಿನಿದಿಸುವುದು.

ಕೇತುಗ್ರಹವು ಶನಿಯ ನಕ್ಷತ್ರವಾದ ಅನೂರಾಧದಲ್ಲಿ ಸ್ಥಿತನಾಗಿ ಕರ್ಕಾಟಕದಲ್ಲಿನ ಕುಜನನ್ನು, ಮತ್ತು ವೃಷಭದಲ್ಲಿರುವ ರವಿ, ಬುಧ,ಮತ್ತು ರಾಹುವನ್ನು ವೀಕ್ಷಿಸಿತ್ತಿರುವನು. ಕುಜ ಮತ್ತು  ಕೇತು ಗ್ರಹಗಳು ಶನಿಯ ನಕ್ಷತ್ರದಲ್ಲಿರುವುದರಿಂದ ವ್ಯಕ್ತಿಗಳ ಮೇಲೆ ಪ್ರಭಾವ ತೋರಲು ಅಸಮರ್ಥರಾಗಿರುತ್ತಾರೆ.  ಕರ್ಖಾಟಕ ರಾಶ್ಯಾಧಿಪತಿ ಚಂದ್ರನ ಸಂಬAದವನ್ನು ಕುಜನಾಗಲಿ ಕೇತುವಾಗಲಿ, ಶನಿಯಾಗಲಿ ಹೊಂದಿಲ್ಲವಾದುದರಿAದ ಕರ್ಕಾಟಕ ರಾಶಿಯ ಸಂಬAಧಿತ ಎದೆ, ಶ್ವಾಶಕೋಶ, ಹೃದಯ ಸಂಬAಧಿತ ರೋಗಗಳು ಬರುವುದಿಲ್ಲ.  ಹಾಗಯೇ ತುಲಾರಾಶಿಯ ಮೇಲೆ ಕುಜ, ಉರೇನಸ್, ಶನಿ, ಗುರು(ವ)ಗ್ರಹಗಳ ದೃಷ್ಟಿಇರುವುದರಿಂದ, ತುಲಾರಾಶಿಗೆ ಸಂಬAಧಿತ  ಗುಪ್ತಾಂಗ ಸಮಸ್ಯೆ ಉಂಟಾಗುವುದಿಲ್ಲ.

ಕೊರೋನಾದ 3ನೆ ಅಲೆಯು 46 ವರ್ಷಗಳ ಮೇಲ್ಪಟ್ಟವರಿಗೆ ಹಲ್ಲುಗಳು ಮತ್ತು ತುಟಿಯಲ್ಲಿ ಸಮಸ್ಯೆ ಕಾಣುವುದು. ಸ್ವಲ್ಪಪ್ರಮಾಣದಲ್ಲಿ ರವಿಸ್ಥಿತನಾಗಿರುವುದರಿಂದ  ಬಲಕಣ್ಣಿನಲ್ಲಿ ಸೋಂಕು ಕಾಣಿಸುವುದು. ಮಾತೃ ಸೂಚಿತ ರಾಶಿಯಲ್ಲಿ ಯುರೇನಸ್ ಲಗ್ನಾಧಿಪತಿ ಕುಜನಿರುವುದರಿಂದ, ವಾಯುತತ್ವ ಶನಿ ವೀಕ್ಷಣೆ ಇರುವುದರಿಂದ, ವಿಶೇಷವಾಗಿ ಮಕ್ಕಳಿಗೆ 12 ವರ್ಷದ ಒಳಗಿನವರಿಗೆ, ತಾಯಿಯಿಂದ ಸೋಂಕು ಹರಡುವುದು. ಪ್ರಸ್ತುತ ಕುಜಗ್ರಹವು ಶನಿಯ ನಕ್ಷತ್ರದಲ್ಲಿದ್ದು, ಮುಂದೆ ರೋಗಕಾರಕನಾದ ಬುಧನ ನಕ್ಷತ್ರವಾದ ಆಶ್ಲೇಷವನ್ನು ಬಿಟ್ಟು ಸಿಂಹರಾಶಿಗೆ ಜುಲೈ 20ರಂದು ಪ್ರವೇಶಿಸುವ ವೇಳೆಗೆ 3ನೆ ಅಲೆಯಿಂದ ಮುಕ್ತರಾಗುವರು. ಶುಕ್ರಗ್ರಹವು ಸಹಿತ 17ರಂದು, ಸಿಂಹರಾಶಿಗೆ ಪ್ರವೇಶಿಸುವನು. 

ಕುಜಶುಕ್ರರ ಯತಿಯಿಂದ ಕೊರೊನ ಅಲೆ ಮುರಿದುಬಿಡುವುದು. ಆತಂಕಪಡುವ ಅವಶ್ಯವಿರುವುದಿಲ್ಲ.  ಪ್ರಬಲ ದೈವಗುರುವಾದ ಗುರುಗ್ರಹವು, ದೈತ್ಯಗುರುವಾದ ಶುಕ್ರಗ್ರಹವನ್ನು ವೀಕ್ಷಿಸುವುದರಿಂದ, ವೈದ್ಯಲೋಕದಲ್ಲಿ ನೂತನ ಔಷಧಿಗಳು ಮುಖ್ಯವಾಗಿ ಆಯುರ್ವೇದ ಸಂಬAಧಿತ ಪದ್ದತಿಯು ಪ್ರಬಲಗೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೂ ಮುಂಜಾಗರೂಕತಾಕ್ರಮವಾಗಿ ಸರ್ಕಾರದ ನೀತಿನಿಯಮಗಳನ್ನು ಪಾಲಿಸುವುದು ಉತ್ತಮ.

ಸರ್ವೇಜನಃ ಸುಖಿನೋ ಭವಂತು

Analysis by 

Dr. M.R. Badarinath P.hd., (Astrology) (Palmistry)

SREE RAMANUJA GURUKULA

No. 35, 3rd Cross, Dwarakanagar, BSK 3rd Stage.  
Bangalore 560085.  Mobile : 9480261881

Post a Comment

0 Comments